ಹುಬ್ಬಳ್ಳಿ, ಅ.08 (DaijiworlNews/HR): ಬಿಜೆಪಿ ಇದೀಗ ಒಡೆದ ಮನೆಯಾಗಿದ್ದು, ಹಾನಗಲ್ಲ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಬಿಜೆಪಿ ಅಭ್ಯರ್ಥಿಯನ್ನು ಹೊರ ಹಾಕಿ ಅಲ್ಲಿನ ಮುಖಂಡರು ಸಭೆ ನಡೆಸಿದ್ದು, ಕ್ಷೇತ್ರದ ಜನರಿಗೆ ಅಭ್ಯರ್ಥಿ ಬೇಡವಾಗಿದ್ದು, ಅವರನ್ನು ಸೋಲಿಸಲು ಜನರೇ ಮುಂದಾಗಿದ್ದಾರೆ" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಈ ಕುರಿತು ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಉಪ ಚುನಾವಣೆಯನ್ನು ಪ್ರತಿಯೊಬ್ಬ ನಾಯಕರು ಮಾಡು ಇಲ್ಲವೇ ಮಡಿ ಎಂದು ನಿರ್ಧರಿಸಿ ಪ್ರಾಮಾಣಿಕವಾಗಿ ಚುನಾವಣೆ ಮಾಡಬೇಕೆಂದು. ಚುನಾವಣೆಗಾಗಿ 20 ದಿನ ಮೀಸಲಿಡುವ ಶಾಸಕರು, ಮಾಜಿ ಶಾಸಕರು, ಪದಾಧಿಕಾರಿಗಳು, ನಾಯಕರಿಗೆ ಮಾತ್ರ ಜವಬ್ದಾರಿ ನೀಡುವಂತೆ ರಾಜ್ಯ ಉಸ್ತುವಾರಿ ರಣದೀಪ ಸುರ್ಜೇವಾಲಾ ಅವರು ತಿಳಿಸಿದ್ದಾರೆ" ಎಂದರು.
ಇನ್ನು "ಮಾಚಿ ಸಚಿವ ಎಚ್.ಕೆ.ಪಾಟೀಲ ನೇತೃತ್ವದಲ್ಲಿ ಹಾನಗಲ್ಲ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ನಡೆಯಲಿದ್ದು, ಜನರು ಬಿಜೆಪಿ ಸೋಲಿಸಲು ಮುಂದಾಗಿದ್ದಾರೆ. ಇದು ಮುಖ್ಯಮಂತ್ರಿಗಳ ಕ್ಷೇತ್ರ ಗೆಲವು ಸಾಧ್ಯವೋ ಎನ್ನುವ ಆಂತಕ ಬೇಡ. ಬಿಜೆಪಿ ಇದೀಗ ಒಡೆದ ಮನೆಯಾಗಿದೆ. ಜವಾಬ್ದಾರಿ ಪಡೆದವರು ತಮ್ಮ ಸ್ವಂತ ಖರ್ಚಿನಲ್ಲೇ ಚುನಾವಣೆ ಮಾಡಬೇಕು. ಯಾರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೆ ಎಂಬುದನ್ನು ಪಕ್ಷ ಗಮನಿಸುತ್ತದೆ" ಎಂದು ಹೇಳಿದ್ದಾರೆ.