ಬೆಂಗಳೂರು, ಅ.08 (DaijiworlNews/HR): ಬಿಜೆಪಿ ಸರ್ಕಾರದಲ್ಲಿ ವಿಧಾನಸೌಧದ ನೌಕರರು ಕೆಲಸ ಕೊಡಿಸುವ ಡೀಲಿಗಿಳಿದಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಕುರಿತು ಭ್ರಷ್ಟಜನತಾಪಾರ್ಟಿ ಎಂಬ ಹ್ಯಾಷ್ ಟ್ಯಾಗ್ ನಡಿ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, " ಬಿ.ಎಸ್ ಯಡಿಯೂರಪ್ಪ ಅವರ ಆಪ್ತ ಸಹಾಯಕನ ಮೇಲಾದ ಐಟಿ ದಾಳಿಯೇ ಎಲ್ಲವನ್ನೂ ಹೇಳುತ್ತಿದೆ. ಸಾರಿಗೆ ನೌಕರನಾಗಿದ್ದವನು ಯಡಿಯೂರಪ್ಪ ಸಹಾಯಕನಾದ ಮಾತ್ರಕ್ಕೆ 2000 ಕೋಟಿ ಆಸ್ತಿಯ ಒಡೆಯ ಎಂದಾದರೆ, ರೈಸ್ ಮಿಲ್ನಲ್ಲಿ ಲೆಕ್ಕ ಬರೆಯುತ್ತಿದ್ದವರು ಇನ್ನೆಷ್ಟು ಕೋಟಿ ಒಡೆಯನಾಗಿರಬಹುದು ಬಿಜೆಪಿ? ಬಿಜೆಪಿಗೆ ಭ್ರಷ್ಟಾಚಾರವೇ ಮನೆದೇವ್ರು" ಎಂದು ವ್ಯಂಗ್ಯವಾಡಿದೆ.
ಇನ್ನು "ಸಚಿವರಾದ ಅಶೋಕ್ ಹಾಗೂ ಶ್ರೀರಾಮುಲು ಸಹಾಯಕರು ವಸೂಲಿ, ಡೀಲ್ಗಳಲ್ಲಿ ತೊಡಗುತ್ತಾರೆ. ಬಿ ಎಸ್ ಯಡಿಯೂರಪ್ಪ ಸಹಾಯಕ 2000 ಕೋಟಿ ದೋಚುತ್ತಾನೆ. ಸಣ್ಣವರ ಲೂಟಿ ಇಷ್ಟಿರುವಾಗ ದೊಡ್ಡವರ ದರೋಡೆ ಎಸ್ಟಿರಬಹುದು" ಎಂದು ಹೇಳಿದೆ.