ತಿರುವನಂತಪುರಂ, ಅ.08 (DaijiworlNews/HR): ನವೆಂಬರ್ 16 ರಿಂದ ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ ತೀರ್ಥಯಾತ್ರೆ ಆರಂಭವಾಗಲಿದ್ದು, ಆರಂಭಿಕ ದಿನಗಳಲ್ಲಿ ಪ್ರತಿದಿನ 25,000 ಭಕ್ತರಿಗೆ ಪ್ರವೇಶವನ್ನು ಅನುಮತಿಸಲಾಗುವುದು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ತೀರ್ಥಯಾತ್ರೆ ಆರಂಭವಾಗುವ ಮೊದಲು ಪ್ರವೇಶ ಪರಿಸ್ಥಿತಿಯನ್ನು ಪರಿಶೀಲಿಸಲು ನಡೆದ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದ್ದು, ದೇವಸ್ಥಾನದ ಮಂಡಳಿ, ಸಾರಿಗೆ, ಅರಣ್ಯ, ಆರೋಗ್ಯ ಮತ್ತು ಜಲ ಸಂಪನ್ಮೂಲಗಳ ರಾಜ್ಯ ಮಂತ್ರಿಗಳು ಹಾಗೂ ರಾಜ್ಯ ಪೊಲೀಸ್ ಮುಖ್ಯಸ್ಥರು ಭಾಗವಹಿಸಿದ್ದರು.
10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮತ್ತು 65 ಕ್ಕಿಂತ ಹೆಚ್ಚಿನ ಯಾತ್ರಾರ್ಥಿಗಳಿಗೆ ಪ್ರವೇಶವನ್ನು ಅನುಮತಿಸಲಾಗುತ್ತದೆ. ಮತ್ತು ಎರಡು ಡೋಸ್ ಕೊರೊನಾ ಲಸಿಕೆ ತೆಗೆದುಕೊಂಡವರಿಗೆ ಅಥವಾ ನೆಗೆಟಿವ್ ಆರ್ಟಿಪಿಸಿಆರ್ ವರದಿಯನ್ನು ಹೊಂದಿರುವವರಿಗೆ ಮಾತ್ರ ದೇಗುಲ ಪ್ರವೇಶಿಸಲು ಅನುಮತಿ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಇನ್ನು ದರ್ಶನ ನಂತರ ಭಕ್ತರನ್ನು ಸನ್ನಿಧಾನದಲ್ಲಿ ಉಳಿಯಲು ಬಿಡುವುದಿಲ್ಲ. ಎಲ್ಲರಿಗೂ 'ನೆಯ್ಯಾಭಿಷೇಕ' (ಅಭಿಷೇಕದ ತುಪ್ಪ) ನೀಡಲು ವ್ಯವಸ್ಥೆ ಮಾಡಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.
ಯಾತ್ರಾರ್ಥಿಗಳನ್ನು ಎರುಮೇಲಿ ಮೂಲಕ ಕಾಡಿನ ಹಾದಿಯಲ್ಲಿ ಅಥವಾ ಪುಲ್ಮೇಡು ಮೂಲಕ ಸನ್ನಿಧಾನಕ್ಕೆ ಸಾಂಪ್ರದಾಯಿಕ ಮಾರ್ಗದಲ್ಲಿ ಅನುಮತಿಸಲಾಗುವುದಿಲ್ಲ ಎಂದು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಈ ನಿರ್ಬಂಧಗಳ ಹೊರತಾಗಿ, ವಾಹನಗಳನ್ನು ನಿಲಕಲ್ ವರೆಗೆ ಮಾತ್ರ ಅನುಮತಿಸಲಾಗುತ್ತದೆ ಮತ್ತು ಅಲ್ಲಿಂದ ಕೆಎಸ್ಆರ್ಟಿಸಿ ಬಸ್ಗಳನ್ನು ಪಂಪಾ ನದಿಗೆ ತಲುಪಲು ಬಳಸಬೇಕು, ಅಲ್ಲಿ ಸ್ನಾನಕ್ಕೆ ಅನುಮತಿ ನೀಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.