ಚಿಕ್ಕಮಗಳೂರು, ಅ.08 (DaijiworlNews/HR): ಮಾಜಿ ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ ಅವರು ಆರ್ಎಸ್ಎಸ್ ಬಗ್ಗೆ ಬೇಜವಾಬ್ದಾರಿ ಮಾತುಗಳನ್ನಾಡುತ್ತಿದ್ದು ಕೂಡಲೆ ಹೇಳಿಕೆಯನ್ನು ವಾಪಸ್ ಪಡೆಯಬೇಕು ಎಂದು ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಒತ್ತಾಯಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಆರ್ಎಸ್ಎಸ್ ಸಾಂಸ್ಕೃತಿಕ ಮತ್ತು ದೇಶಭಕ್ತ ಸಂಘಟನೆ ಇದರ ವಿರುದ್ಧ ಕುಮಾರಸ್ವಾಮಿ ಅನಗತ್ಯ ಆರೋಪ ಮಾಡಿದ್ದಾರೆ" ಎಂದರು.
ಇನ್ನು "ದತ್ತಪೀಠದ ವಿಚಾರದಲ್ಲಿ ಅನೇಕ ವರ್ಷಗಳ ಹೋರಾಟ ಮಾಡಿದ್ದು, ಪ್ರಕರಣ ಸುಪ್ರೀಂಕೋರ್ಟ್ ವರೆಗೆ ಹೋಗಿ ವಾಪಸ್ ಬಂದಿದೆ ಹೈಕೋರ್ಟ್ ತೀರ್ಪಿನ ಅನ್ವಯ ರಾಜ್ಯ ಸರ್ಕಾರ ಈಗ ಸಚಿವರ ಸಮಿತಿಯೊಂದನ್ನು ರಚಿಸಿದ್ದು ತಕ್ಷಣ ಹಿಂದೂ ಅರ್ಚಕರನ್ನು ನೇಮಿಸಿ ಪೂಜಾ ಕಾರ್ಯಗಳನ್ನು ನಡೆಸಬೇಕು" ಎಂದಿದ್ದಾರೆ.