ಬೆಂಗಳೂರು ,ಅ 08 (DaijiworldNews/MS): "ಬಿಜೆಪಿ ನಾಯಕರ ಕಾರು ನಿಮ್ಮ ಪಕ್ಕದಲ್ಲಿ ಹೋಗುವಾಗ ನಿಮ್ಮ ಫೋನ್ ಕ್ಯಾಮರಾದಿಂದ ರೆಕಾರ್ಡ್ ಮಾಡಿಕೊಳ್ಳಿ. ಯಾವಾಗ, ಯಾರ ಮೇಲೆ ಕಾರು ಹತ್ತಿಸಿ ಕೊಲ್ಲುತ್ತಾರೆ ಎಂದು ತಿಳಿಯುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ , ನಿಮ್ಮ ಬಳಿ ಬರೋವಾಗ ತಲೆಗೆ ಹೆಲ್ಮೆಟ್ ಧರಿಸಿಕೊಂಡು ಬರಬೇಕೇ ಎಂದು ಪ್ರಶ್ನಿಸಿದೆ.
"ಬಿಜೆಪಿ ನಾಯಕರ ಕಾರು ನಿಮ್ಮ ಪಕ್ಕದಲ್ಲಿ ಹೋಗುವಾಗ ನಿಮ್ಮ ಫೋನ್ ಕ್ಯಾಮರಾದಿಂದ ರೆಕಾರ್ಡ್ ಮಾಡಿಕೊಳ್ಳಿ. ಯಾವಾಗ, ಯಾರ ಮೇಲೆ ಕಾರು ಹತ್ತಿಸಿ ಕೊಲ್ಲುತ್ತಾರೆ ಎಂದು ತಿಳಿಯುವುದಿಲ್ಲ. ಹೀಗಿದ್ದಾಗ, ನಿಮ್ಮ ವೀಡಿಯೊ ಮುಂದೆ ಮಹತ್ವದ ಸಾಕ್ಷ್ಯವಾಗಿರಲಿದೆ. ಇದು ದೇಶಕ್ಕೆ ನೀವು ನೀಡುವ ಉತ್ತಮ ಕೊಡುಗೆಯಾಗಿದೆ ಎಂದು ಶಿವಕುಮಾರ್ ಹೇಳಿದ್ದರು
ರೈತ ವಿರೋಧಿ ಕಾಯ್ದೆಯ ವಿರುದ್ಧ ಅಖಿಂಪುರದಲ್ಲಿ ಪ್ರತಿಭಟಿಸುತ್ತಿದ್ದ ರೈತರ ಮೇಲೆ ಬಿಜೆಪಿ ನಾಯಕ ಜೀಪು ಚಲಾಯಿಸಿದ ವೀಡಿಯೋವನ್ನು ಬಗ್ಗೆ ಪ್ರಸ್ತಾಪ ಮಾಡಿರುವ ಅವರು, ಟ್ವಿಟರ್ನಲ್ಲಿ ವಿಡಿಯೋ ಸಂದೇಶ ಹಂಚಿಕೊಂಡಿದ್ದರು.
ಅಂಬಾಲಾ ಬಳಿಯ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಬಿಜೆಪಿ ಸಂಸದ ನಯಾಬ್ ಸೈನಿ ಜೀಪು ಹರಿಸಿದ್ದಾರೆ. ಬಿಜೆಪಿಯ ಯಾವುದೇ ನಾಯಕರು ನಿಮ್ಮ ಪಕ್ಕದಲ್ಲಿ ಹಾದುಹೋಗುವಾಗ ಎಚ್ಚರದಿಂದಿರಿ. ಇತ್ತೀಚೆಗೆ ಬಿಜೆಪಿ ನಾಯಕರು ಜನರ ಮೇಲೆ ವಾಹನ ಚಲಾಯಿಸಿ ಸಾಯಿಸುತ್ತಿದ್ದಾರೆ .ಇಂತಹ ಘಟನೆ ನಡೆದರೆ ರೆಕಾರ್ಡ್ ಮಾಡಿ ಮತ್ತು ಜಾಗೃತರಾಗಿರಿ ಎಂದು ಪ್ರತಿಯೊಬ್ಬರಲ್ಲೂ ನಾನು ವಿನಂತಿಸಿಕೊಳ್ಳುತ್ತೇನೆ ಎಂದು ಹೇಳಿದ್ದರು..
ಇನ್ನು ಇದಕ್ಕೆ ಪ್ರತಿಯಾಗಿ ಬಿಜೆಪಿಯೂ ಟ್ವಿಟ್ ಮಾಡಿದ್ದು ನಿಮ್ಮ ಬಳಿ ಬರುವವರು ಏನು ಮಾಡಬೇಕು? ತಲೆಗೆ ಹೆಲ್ಮೆಟ್ ಧರಿಸಿಕೊಂಡು ಬರಬೇಕೇ? ಎಂದು ಪ್ರಶ್ನಿಸಿ ಡಿಕೆಶಿ ಕಾರ್ಯಕರ್ತರೊಬ್ಬರಿಗೆ ಕಪಾಳಮೋಕ್ಷ ಮಾಡಿದ ವಿಡಿಯೋ ಶೇರ್ ಮಾಡಿದೆ.
ಮಾನ್ಯ ಡಿಕೆಶಿವಕುಮಾರ್ ಅವರೇ, ಜನರು ಈಗಾಗಲೇ ನಿಮ್ಮ ಹಾಗೂ ನಿಮ್ಮ ಪಕ್ಷದ ಮುಖಂಡರ ಭಾವಚಿತ್ರ ತೆಗೆದುಕೊಳ್ಳಲಾರಂಭಿಸಿದ್ದಾರೆ. ಕಂಡ ಕಂಡವರ ಮೇಲೆ ಹಲ್ಲೆ ಮಾಡುವುದು, ಕೊಲ್ಲುವುದು ನಿಮ್ಮ ಪಕ್ಷದ ಹಳೆ ಚಾಳಿಯಲ್ಲವೇ? ಸಾವಿರಾರು ಮುಗ್ದ ಸಿಖ್ಖರಿಗೂ, ನಾವು ಕಾಂಗ್ರೆಸ್ಸಿಗರಿಂದ ಕೊಲ್ಲಲ್ಪಡುತ್ತೇವೆ ಎಂಬ ಸುಳಿವಿರಲಿಲ್ಲ ಎಂದು ಬಿಜೆಪಿ ಟಾಂಗ್ ನೀಡಿದೆ.