ಕೊಲ್ಕತ್ತಾ, ಅ.08 (DaijiworlNews/HR): ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಫೋಟೋವನ್ನು ದುರ್ಗಾ ದೇವಿ ರೀತಿ ಕೊಲ್ಕತ್ತಾದಲ್ಲಿ ಸ್ಥಾಪನೆ ಮಾಡಲಾಗಿದೆ.
ನವರಾತ್ರಿ ಪೂಜೆ ಪ್ರಾರಂಭವಾಗಿದ್ದು, ಕೋಲ್ಕಾತ್ತಾದಲ್ಲಿ ದುರ್ಗಾ ಪೂಜೆಗೆ ತೃಣಮೂಲ ಮಮತಾ ಬ್ಯಾನರ್ಜಿ ಅವರ ಫೋಟೋವನ್ನು ದೇವತೆಯ ವಿಗ್ರಹದಂತೆ ಸ್ಥಾಪಿಸಿದ್ದು, ಅವರನ್ನು ದುರ್ಗಾ ದೇವಿಯಂತೆ ಚಿತ್ರಿಸಲಾಗಿದೆ.
ಇನ್ನು ವಿಗ್ರಹದ ಪ್ರತಿಯೊಂದು ಬಿಂಬವು ಅವರ ಸರ್ಕಾರದ ಪ್ರತಿ ಅಂಶವನ್ನು ಪ್ರತಿನಿಧಿಸುತ್ತದೆ ಎಂದು ಬಾಗುಯತಿ ನಜರುಲ್ ಪಾರ್ಕ್ ಉನ್ನಯನ ಸಮಿತಿಯ ಅಧ್ಯಕ್ಷ ಇಂದ್ರನಾಥ್ ಬಾಗಿ ಹೇಳಿದರು.
ಈ ವಿಗ್ರಹದಲ್ಲಿ ಮಮತಾ ಬ್ಯಾನರ್ಜಿ ಅವರಂತೆ ನೀಲಿ ಹಂಚು ಮತ್ತು ಬಿಳಿ ಸೀರೆಯನ್ನು ಉಟ್ಟು ನಮಸ್ಕರಿಸಿ ನಿಂತಿದ್ದು, ಅವರ ಹಿಂದೆ ಇರುವ ಎಂಟು ಕೈಗಳು, ಅವರ ಸರ್ಕಾರದಲ್ಲಿ ಕೈಗೊಂಡಿದ್ದ ಯೋಜನೆಗಳು ಮತ್ತು ಸಾಧನೆಯನ್ನು ಪ್ರತಿನಿಧಿಸುತ್ತದೆ.