ಕೋಲ್ಕತ್ತ, ಅ.07 (DaijiworldNews/PY): ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ವಿಧಾನಸಭೆಯ ಸದಸ್ಯರಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಮಮತಾ ಬ್ಯಾನರ್ಜಿ ಅವರಿಗೆ ರಾಜ್ಯಪಾಲ ಜಗದೀಪ್ ಧಂಕರ್ ಅವರು ಪ್ರಮಾಣವಚನ ಬೋಧಿಸಿದರು.
ಈ ವೇಳೆ ಮಮತಾ ಅವರೊಂದಿಗೆ ಟಿಎಂಸಿಯ ಜಾಕೀರ್ ಹೊಸೆನ್ ಹಾಗೂ ಅಮಿರುಲ್ ಇಸ್ಲಾಂ ಅವರು ಕೂಡಾ ಶಾಸಕರಾಗಿ ಪ್ರಮಾಣ ವಚನ ಪಡೆದರು.
ಮಮತಾ ಬ್ಯಾನರ್ಜಿ ಅವರು ಮಾರ್ಚ್-ಎಪ್ರಿಲ್ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ನಂದಿಗ್ರಾಮ ಕ್ಷೇತ್ರದಿಂದ ಸ್ಪರ್ಧಿಸಿದ್ದರೂ, ತಮ್ಮ ಎದುರಾಳಿ ಬಿಜೆಪಿಯ ಸುವೇಂದು ಅಧಿಕಾರಿ ವಿರಿದ್ದ ಸೋಲು ಕಂಡಿದ್ದರು. ಅದರೂ, ಪಕ್ಷ ಬಹುಮತ ಪಡೆದ ಹಿನ್ನೆಲೆ ಮೇ.5ರಂದು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದರು.
ಗುರುವಾರ ಮಮತಾ ಬ್ಯಾನರ್ಜಿ ಅವರೊಂದಿಗೆ ಟಿಎಂಸಿ ಶಾಸಕರಾದ ಜಾಕೀರ್ ಹೊಸೇನ್ ಹಾಗೂ ಅಮಿರುಲ್ ಇಸ್ಲಾಂ ಕೂಡಾ ಪ್ರಮಾಣವಚನ ಸ್ವೀಕರಿಸಿದರು. ಜಾಕಿರ್ ಹೊಸೇನ್ ಜಂಗೀಪುರ ಕ್ಷೇತ್ರದಿಂದ 92,480 ಮತಗಳ ಅಂತರದಲ್ಲಿ ಗೆದ್ದಿದ್ದರೆ, ಸಂಸೇರ್ಗಂಜ್ನಿಂದ ಅಮಿರುಲ್ ಇಸ್ಲಾಂ 26,379 ಮತಗಳಿಂದ ಗೆಲುವು ಸಾಧಿಸಿದ್ದಾರೆ.