ಬೆಂಗಳೂರು, ಅ.07 (DaijiworldNews/PY): 80 ಬಿಜೆಪಿ ಸದಸ್ಯರ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ರಚನೆ ಮಾಡಿದ್ದು, ಪ್ರಲ್ಹಾದ ಜೋಶಿ, ನಿರ್ಮಲಾ ಸೀತರಾಮನ್ ಅವರಿಗೆ ಕರ್ನಾಟಕದಿಂದ ಪ್ರಾತಿನಿಧ್ಯ ದೊರೆತಿದೆ.
ಇನ್ನು ರಾಷ್ಟರೀಯ ಕಾರ್ಯಕಾರಿಣಿ ಸಮಿತಿಯಲ್ಲಿ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರಿಗೂ ಸ್ಥಾನ ನೀಡಲಾಗಿದೆ. ಇದರ ಜೊತೆ ಸಂಸದ ಉಮೇಶ್ ಜಾಧವ್, ಸಚಿವರಾದ ಡಾ.ಅಶ್ವತ್ಥ ನಾರಾಯಣ್ ಸೇರಿದಂತೆ ಆರ್ ಅಶೋಕ್, ಲಕ್ಷಣ್ ಸವದಿ, ಕೆ ಎಸ್ ಈಶ್ವರಪ್ಪ, ಗೋವಿಂದ ಕಾರಜೋಳ ಅವರಿಗೆ ವಿಶೇಷ ಆಹ್ವಾನಿತರ ಸ್ಥಾನ ನೀಡಲಾಗಿದೆ.
ಕಾರ್ಯಕಾರಿಣಿಯಲ್ಲಿ 80 ಸಾಮಾನ್ಯ ಸದಸ್ಯರೊಂದಿಗೆ, 50 ವಿಶೇಷ ಆಹ್ವಾನಿತರು ಹಾಗೂ 170 ಕಾಯಂ ಆಹ್ವಾನಿತರ ಸದಸ್ಯರೂ ಇರಲಿದ್ದಾರೆ. 80 ಸದಸ್ಯರ ಪೈಕಿ 37 ಮಂದಿ ಕೇಂದ್ರ ಸಚಿವರು ಹಾಗೂ ರಾಜ್ದ ಹಲವು ಸಚಿವರು ಸಮಿತಿಯಲ್ಲಿ ಪಾಲ್ಗೊಳ್ಳಲಿದ್ದಾರೆ.