ಶಿಕಾರಿಪುರ, ಅ.07 (DaijiworldNews/HR): ಕರ್ನಾಟಕದಲ್ಲಿ ಮಸೀದಿಗಳ ಮೇಲೆ ಆಕ್ರಮವಾಗಿ ಹಾಕಲಾಗಿರುವ ಮೈಕ್ಗಳನ್ನು ತೆರವುಗೊಳಿಸಿ ಎಂದು ಶ್ರೀ ರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ.
ಈ ಕುರಿತು ಪಟ್ಟಣದ ತಾಲ್ಲೂಕು ಕಛೇರಿ ಎದುರು ಪ್ರತಿಭಟನೆ ನಡೆಸಿ ತಹಶೀಲ್ದಾರ್ ರವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, "ವಿಶ್ವದ 16 ರಾಷ್ಟ್ರಗಳಲ್ಲಿ ಮಸೀದಿಗಳ ಮೈಕ್ ಅಳವಡಿಕೆಯನ್ನು ತಡೆಗಟ್ಟಿದ್ದು, ನಮ್ಮ ಭಾರತ ದೇಶದ ಮಸೀದಿಯ ಮೇಲೆ ಮೈಕ್ ಅಳವಡಿಕೆಯನ್ನು ತಡೆಗಟ್ಟುವ ಕೆಲಸ ಏಕೆ ಮಾಡುತ್ತಿಲ್ಲ. ಅದರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು" ಎಂದರು.
ಇನ್ನು ರಾತ್ರಿ 10 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ಶಬ್ದ ಮಾಲಿನ್ಯ ತಡೆಗಟ್ಟಬೇಕು. ಇದರ ಬಗ್ಗೆ ಶಬ್ದ ಮಾಲಿನ್ಯ ನಿಯಂತ್ರಣ ಮಂಡಳಿ ಕಟ್ಟುನಿಟ್ಟಿನ ಕಾರ್ಯ ನಿರ್ವಹಿಸುತ್ತಿಲ್ಲ. ಈ ಸಮಯದಲ್ಲಿ ಮೈಕ್ ಗಳಿಗೆ ನಿರ್ಬಂಧ ಇದ್ದರೂ, ಸುಪ್ರೀಂ ಕೋರ್ಟ್ ಆದೇಶ ನೀಡಿದರೂ ಮಸೀದಿಗಳಲ್ಲಿ ಬೆಳಿಗ್ಗೆ 5 ಗಂಟೆಯ ವೇಳೆಗೆ ಅಜಾನ್ ಕೂಗುತ್ತಿದ್ದರೂ ಯಾಕೆ ತಡೆಯುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.