ಹುಬ್ಬಳ್ಳಿ, ಅ.07 (DaijiworldNews/HR): ಸಿದ್ದರಾಮಯ್ಯ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರು ಕೇವಲ ಮತಬ್ಯಾಂಕ್ಗಾಗಿ ಆರ್ಎಸ್ಎಸ್ ವಿರುದ್ದ ಪೈಪೋಟಿಯಂತೆ ಟೀಕೆಗಿಳಿದಿದ್ದಾರೆ ಎಂದು ಜಗದೀಶ ಶೆಟ್ಟರ್ ಆರೋಪಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಭಾರತದಲ್ಲಿ ಆರ್ಎಸ್ಎಸ್ ಇಲ್ಲದಿದ್ದರೆ ಈ ವೇಳೆಗೆ ಭಾರತ ಮೂರ್ನಾಲ್ಕು ಪಾಕಿಸ್ಥಾನ ಆಗುತ್ತಿತ್ತು. ದೇಶಪ್ರೇಮ ಸಂಘಟನೆ ಬಗ್ಗೆ ಇಲ್ಲಸಲ್ಲದ ಟೀಕೆ ಮೂಲಕ ಇಬ್ಬರು ತಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ತಂದುಕೊಳುತ್ತಿದ್ದಾರೆ" ಎಂದರು.
ಇನ್ನು ಆರ್ಎಸ್ಎಸ್ ಅನ್ನು ಟೀಕಿಸಿದರೆ ಮುಸ್ಲಿಂ ಮತದಾರರು ತಮ್ಮ ಪರವಾಗುತ್ತಾರೆಂಬ ಭ್ರಮೆಯಲ್ಲಿದ್ದು, ಮುಸ್ಲಿಮರಿಗೂ ಇವರ ಬಂಡವಾಳ ಗೊತ್ತಾಗಿದ್ದು, ಅನೇಕರು ಬಿಜೆಪಿ ಸೇರಿದ್ದಾರೆ, ಸಂಘ ಕಾರ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ" ಎಂದಿದ್ದಾರೆ.
ನಾವು ಸಂಘ ಮೂಲದಿಂದ ಬಂದವರು, ಇಂದಿಗೂ ಸಂಘ ಕಾರ್ಯಕರ್ತರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತವೆ, ಇದರಲ್ಲಿ ಯಾವುದೇ ಹಿಂಜರಿಕೆ ಇಲ್ಲ ಎಂದು ಹೇಳಿದ್ದಾರೆ.