ಬೆಂಗಳೂರು, ಅ.07 (DaijiworldNews/PY): "ದೇಶದಲ್ಲಿರುವ 4 ಸಾವಿರ ಐಎಎಸ್, ಐಪಿಎಸ್ ಅಧಿಕಾರಿಗಳು ಆರ್ಎಸ್ಎಸ್ ಕಾರ್ಯಕರ್ತರು ಎನ್ನುವ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರ ಹೇಳಿಕೆ ಸಂತಸ ತಂದಿದೆ" ಎಂದು ಮಾಜಿ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ದೇಶದಲ್ಲಿರುವ 4 ಸಾವಿರ ಸಿವಿಲ್ ಅಧಿಕಾರಿಗಳು ಆರ್ಎಸ್ಎಸ್ನಿಂದ ಬಂದವರು ಎನ್ನುವ ವಿಚಾರ ಸಂತಸ ತಂದಿದೆ. ಆರ್ಎಸ್ಎಸ್ ಕಾರ್ಯಕರ್ತರು ಎಂದರೆ ಶಿಸ್ತಿನ ಸಿಪಾಯಿಗಳು. ಆರ್ಎಸ್ಎಸ್ನವರು ಅಧಿಕಾರಿಗಳಾದರೆ ಅಲ್ಲಿ ಶಿಸ್ತು ಇರುತ್ತದೆ. ಹಾಗಾಗಿ ಆಡಳಿತಕ್ಕೆ ಅಂತಹ ಅಧಿಕಾರಿಗಳು ಸಹಕಾರಿ" ಎಂದಿದ್ದಾರೆ.
"ಆರ್ಎಸ್ಎಸ್ ಯುವಕರು ಅಧಿಕಾರಿಗಳಾಗದೇ ಇದ್ದಲ್ಲಿ ಅಂತವರನ್ನು ಕರೆದು ನಾನೇ ಸ್ವತಃ ಸನ್ಮಾನ ಮಾಡುತ್ತೇನೆ. ಆದರೆ, ಆರ್ಎಸ್ಎಸ್ ಬಗ್ಗೆ ಹೆಚ್ಡಿಕೆ ಅವರು ಮಾಡುತ್ತಿರುವ ಆರೋಪದಲ್ಲಿ ಹುರುಳಿಲ್ಲ. ಸಂಸ್ಥೆಗಳಲ್ಲಿ ಆರ್ಎಸ್ಎಸ್ ತಂಡದವರಿಂದ ತರಬೇತಿ ನೀಡಲಾಗುತ್ತಿದೆ ಎನ್ನುವುದು ಸುಳ್ಳು" ಎಂದು ತಿರುಗೇಟು ನೀಡಿದ್ದಾರೆ.