ತಮಿಳುನಾಡು, ಅ.07 (DaijiworldNews/PY): "ಭಾರತೀಯ ಮೀನುಗಾರರ ಮೇಲೆ ಶ್ರೀಲಂಕಾ ನೌಕಾಪಡೆಯು ಕಲ್ಲು ತೂರಿ ಬೆದರಿಕೆಯೊಡ್ಡಿದ್ದು, ಈ ಘಟನೆಯ ಪರಿಣಾಮ ಮೀನುಗಾರಿಕೆಯ ಬಲೆಗಳು ಹಾನಿಗೊಂಡಿವೆ" ಎಂದು ತಮಿಳುನಾಡು ಸರ್ಕಾರಿ ಅಧಿಕಾರಿಗಳು ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
"ಶ್ರೀಲಂಕಾ ನೌಕಾ ಸಿಬ್ಬಂದಿ ಹತ್ತು ಮೀನುಗಾರಿಕಾ ದೋಣಿಗಳಲ್ಲಿ ಬಂದಿದ್ದು, ಭಾರತೀಯ ಮೀನುಗಾರರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಆದರೆ, ಯಾರಿಗೂ ಗಾಯಗಳಾಗಿಲ್ಲ. ಕಚ್ಚತೀವು ಬಳಿ ಈ ಘಟನೆ ನಡೆದಿದೆ" ಎಂದು ಮೀನುಗಾರಿಕಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
"ಈ ಬಗ್ಗೆ ಮೀನುಗಾರಿಕಾ ಅಧಿಕಾರಿಗಳಿಗೆ ದೂರು ನೀಡಲಾಗಿದೆ" ಎಂದು ಮೀನುಗಾರರ ಸಂಘದ ಪ್ರತಿನಿಧಿಗಳು ಹೇಳಿದ್ದಾರೆ.
ಈ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಮೀನುಗಾರರ ಸಂಘದ ಪ್ರತಿನಿಧಿಗಳು, "ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು" ಎಂದು ಆಗ್ರಹಿಸಿದ್ದಾರೆ.