ಶ್ರೀನಗರ, ಅ.07 (DaijiworldNews/PY): "ಶ್ರೀನಗರದ ಸಂಗಮ್ ಈದ್ಗಾ ಪ್ರದೇಶದ ಸರ್ಕಾರಿ ಶಾಲೆಯಲ್ಲಿ ಗುರುವಾರ ನಡೆದ ಭಯೋತ್ಪಾದಕ ದಾಳಿಯಲ್ಲಿ ಇಬ್ಬರು ಶಿಕ್ಷಕರು ಸಾವನ್ನಪ್ಪಿದ್ದಾರೆ" ಎಂದು ಜಮ್ಮು-ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
"ಶ್ರೀನಗರ ಜಿಲ್ಲೆಯ ಸಂಗಮ್ ಈದ್ಗಾದಲ್ಲಿ ಬೆಳಗ್ಗೆ 11.15ಕ್ಕೆ ಭಯೋತ್ಪಾದಕರು ಇಬ್ಬರು ಶಾಲಾ ಶಿಕ್ಷಕರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ" ಎಂದು ಪೊಲೀಸ್ ಅಧಿಕಾರಿಯೋರ್ವರು ಹೇಳಿದ್ದಾರೆ.
"ಘಟನಾ ಪ್ರದೇಶವನ್ನು ಸುತ್ತುವರಿಯಲಾಗಿದ್ದು, ದಾಳಿಕೋರರನ್ನು ಬಂಧಿಸಲು ಕಾರ್ಯಾಚರಣೆ ಆರಂಭಿಸಲಾಗಿದೆ" ಎಂದಿದ್ದಾರೆ.
ಮಂಗಳವಾರ ಇಕ್ಬಾಲ್ ಉದ್ಯಾನದಲ್ಲಿ ಕಾಶ್ಮೀರ ಪಂಡಿತ, ಶ್ರೀನಗರದ ಪ್ರಮುಖ ಔಷಧ ಅಂಗಡಿ ಮಾಲೀಕ ಮಖಾನ್ ಲಾಲ್ ಬಿಂದ್ರೂ ಅವರ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದರು.
ಈ ಘಟನೆ ನಡೆದ ಎರಡು ದಿನಗಳ ಬಳಿಕ ಇನ್ನೊಂದು ದಾಳಿ ನಡೆದಿದೆ.