ಬೆಂಗಳೂರು, ಅ.07 (DaijiworldNews/HR): ಹೆಚ್.ಡಿ.ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಇಬ್ಬರು ಬುದ್ಧಿ ಸ್ಥಿಮಿತ ಕಳೆದುಕೊಂಡು ಆರ್ಎಸ್ಎಸ್ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕಿಡಿಕಾರಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಕುಮಾರಸ್ವಾಮಿ ಕುರುಡು ಕಣ್ಣಿನಿಂದ ಆರ್ಎಸ್ಎಸ್ ಅನ್ನು ನೋಡಿದ್ದಾರೆ. ಹೆಚ್.ಡಿ.ಕೆ, ಸಿದ್ದರಾಮಯ್ಯ ಸಂಘದ ಕಚೇರಿಗೆ ಬಂದು ನೋಡಿ ಆ ಬಳಿಕ ಆರ್ಎಸ್ಎಸ್ ಸಂಘಟನೆ ಬಗ್ಗೆ ಮಾತನಾಡಲಿ" ಎಂದರು.
ಇನ್ನು "ಕೆಲವು ವ್ಯಕ್ತಿಗಳು ಅಧಿಕಾರ ಇಲ್ಲದಿದ್ದಾಗ ಸ್ಥಿಮಿತ ಕಳೆದುಕೊಳ್ಳುತ್ತಾರೆ ಹಾಗೇ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿಯವರಿಗೆ ಅಧಿಕಾರ ಇಲ್ಲದೆಯೇ ಹುಚ್ಚು ಹಿಡಿದಿದೆ. ಅನಗತ್ಯವಾಗಿ ಚಿಲ್ಲರೆ ರಾಜಕಾರಣ ಮಾಡಿ ವ್ಯಕ್ತಿತ್ವ ಹಾಳು ಮಾಡಿಕೊಳ್ಳಬೇಡಿ " ಎಂದು ಹೇಳಿದ್ದಾರೆ.