ನವದೆಹಲಿ, ಅ.07 (DaijiworldNews/HR): ಕಟ್ಟಡದ ಎರಡನೇ ಮಹಡಿಯಿಂದ ಕೋತಿಯೊಂದು ಇಟ್ಟಿಗೆ ಎಸೆದಿದ್ದು, ಕಟ್ಟಡದ ಕೆಳಗೆ ನಿಂತಿದ್ದ ವ್ಯಕ್ತಿಯ ತಲೆಗೆ ಬಡಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ದೆಹಲಿಯ ನಬಿ ಕರೀಮ್ ಪ್ರದೇಶದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾವನ್ನಪ್ಪಿದ ವ್ಯಕ್ತಿಯನ್ನು ಮೊಹಮ್ಮದ್ ಕುರ್ಬಾನ್ ಎಂದು ಗುರುತಿಸಲಾಗಿದೆ.
ತಲೆಗೆ ತೀವ್ರ ಗಾಯವಾದ ನಂತರ ಕುಸಿದು ಬಿದ್ದಿದ್ದು, ಅವರನ್ನು ತಕ್ಷಣ ಆರ್ ಎಂಎಲ್ ಆಸ್ಪತ್ರೆಗೆ ಸಾಗಿಸಲಾಗಿತ್ತು ಆದರೆ ಅದಾಗಲೇಅವರು ಮೃತಪಟ್ಟಿದ್ದರು.
ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾದ ಸೆಕ್ಷನ್ ಗಳ ಅಡಿಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಇನ್ನು ಮೃತರು ಕುರ್ಬಾನ್ ನಬಿ ಕರೀಮ್ ಪ್ರದೇಶದ ಅಂಗಡಿಯಲ್ಲಿ ಚೀಲಗಳನ್ನು ಮಾರಾಟ ಮಾಡುತ್ತಿದ್ದು, ಪತ್ನಿ ಮತ್ತು ಐದು ವರ್ಷದ ಮಗುವನ್ನು ಅಗಲಿದ್ದಾರೆ ಎಂದು ತಿಳಿದು ಬಂದಿದೆ.