ಮೈಸೂರು, ಅ.07 (DaijiworldNews/PY): ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರು ಗುರುವಾರ ಐತಿಹಾಸಿಕ, ನಾಡಹಬ್ಬ, ಮೈಸೂರಿನ 411ನೇ ದಸರಾ ಮಹೋತ್ಸವಕ್ಕೆ ಚಾಲನೆ ಚಾಲನೆ ನೀಡಿದ್ದಾರೆ.
ನಾಡದೇವತೆ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ದಸರಾ ಮಹೋತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದ್ದಾರೆ.
ಉದ್ಘಾಟನೆಗೂ ಮೊದಲು ಇಂದು ಬೆಳಗಿನಿಂದಲೇ ನಾಡದೇವತೆ ಚಾಮುಂಡೇಶ್ವರಿಗೆ ರುದ್ರಾಭಿಷೇಕ, ಪಂಚಾಮೃತಭಿಷೇಕ, ಮಹಾನ್ಯಾಸ ಸೇರಿ ವಿವಿಧ ಪೂಜೆಗಳು ನಡೆದವು. ಕೊರೊನಾ ಹಿನ್ನೆಲೆ ಈ ಬಾರಿಯೂ ದಸರಾವನ್ನು ಸರಳ ಹಾಗೂ ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತಿದೆ.
ಈ ಸಂದರ್ಭ ಸಿಎಂ ಬಸವರಾಜ ಬೊಮ್ಮಾಯಿ, ಸಚಿವರಾದ ಆರ್ ಅಶೋಕ್, ಸುನಿಲ್ ಕುಮಾರ್, ಭೈರತಿ ಬಸವರಾಜ್, ಶಿವರಾಮ್ ಹೆಬ್ಬಾರ್, ಎಸ್ ಟಿ ಸೋಮಶೇಖರ್, ಡಾ.ಕೆ ಸುಧಾಕರ್, ಸಂಸದ ಪ್ರತಾಪ್ ಸಿಂಹ, ತನ್ವೀರ್ ಸೇಟ್, ರಾಮದಾಸ್ ಹಾಗೂ ಹಲವಾರು ಗಣ್ಯರು ಪಾಲ್ಗೊಂಡಿದ್ದಾರೆ.