ಬೆಂಗಳೂರು, ಅ.06 (DaijiworldNews/PY): "ರೈತರನ್ನು ಸರ್ಕಾರದ ವಿರುದ್ಧ ಕಾಂಗ್ರೆಸ್ ಎತ್ತಿ ಕಟ್ಟುತ್ತಿದೆ, ಇದು ಕಾನೂನು ಬಾಹಿರವಲ್ಲವೇ?" ಎಂದು ರಾಜ್ಯ ಬಿಜೆಪಿ ಪ್ರಶ್ನಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, "ಕೃಷಿ ಕಾನೂನುಗಳ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಮಾಡಿರುವ ಅವಲೋಕನಗಳ ಬಗ್ಗೆ ಕಾಂಗ್ರೆಸ್ ಏಕೆ ಮಾತನಾಡುತ್ತಿಲ್ಲ. ವಿಚಾರಣೆ ನಡೆಯುತ್ತಿರುವಾಗ ಹೋರಾಟ ನಡೆಸುತ್ತಿರುವುದೇಕೆ ಎಂದು ರೈತ ಸಂಘಟನೆಗಳಿಗೆ ನೋಟಿಸ್ ನೀಡಲಾಗಿದೆ. ಇಷ್ಟರ ಮೇಲೂ ರೈತರನ್ನು ಸರ್ಕಾರದ ವಿರುದ್ಧ ಕಾಂಗ್ರೆಸ್ ಎತ್ತಿ ಕಟ್ಟುತ್ತಿದೆ, ಇದು ಕಾನೂನು ಬಾಹಿರವಲ್ಲವೇ?" ಎಂದು ಕೇಳಿದೆ.
ಕಾನೂನು ಸುವ್ಯವಸ್ಥೆ ಗೆ ಧಕ್ಕೆ ತರುವ ಏಕೈಕ ಉದ್ದೇಶವನ್ನು ಪ್ರಿಯಾಂಕ ಗಾಂಧಿ ಹೊಂದಿದ್ದರು. ಅವರ ಬಂಧನ ಮುಂಜಾಗ್ರತಾ ಕ್ರಮವಾಗಿತ್ತೇ ಹೊರತು, ಬೇರೇನಿಲ್ಲ. ಭಾರತೀಯ ದಂಡ ಸಂಹಿತೆಯ ಈ ವಿಧಿಯನ್ನು ಕಾಂಗ್ರೆಸ್ ಯಥೇಚ್ಛವಾಗಿ ಬಳಸಿಕೊಂಡಿದೆ. ಆ ಘಟನೆಗಳನ್ನು ನೆನಪಿಸಬೇಕೇ ಕಾಂಗ್ರೆಸ್?" ಎಂದು ಪ್ರಶ್ನಿಸಿದೆ.
"ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಾಧೀಶರಿಂದ ಹಿಡಿದು ಎಲ್ಲಾ ಕಾನೂನು ತಜ್ಞರು ಪ್ರಿಯಾಂಕ ಗಾಂಧಿ ಅವರ ಬಂಧನ ಕಾನೂನುಬಾಹಿರ ಎಂದಿದ್ದಾರೆ. ಈ ದೇಶದ ಪ್ರಜಾಪ್ರಭುತ್ವ, ಸಂವಿಧಾನ, ಕಾನೂನು, ಸಂಸ್ಕೃತಿ, ಯಾವುದರಲ್ಲೂ ಗೌರವವಿರದ ಬಿಜೆಪಿ ತಾಲಿಬಾನಿಗಳಂತೆಯೇ ತಮ್ಮದೇ ಪ್ರತ್ಯೇಕ ಕಾನೂನುಗಳನ್ನು ಸೃಷ್ಟಿಸಿದೆಯೇ?" ಎಂದು ಕಾಂಗ್ರೆಸ್ ಪ್ರಶ್ನಿಸಿತ್ತು.
"ಮೃತ ರೈತರಿಗೆ ಸಾಂತ್ವನ ಹೇಳಲು ತೆರಳಿದ ಪ್ರಿಯಾಂಗ ಗಾಂಧಿ ಅವರನ್ನು ಸಿಆರ್ಪಿಸಿ 151 ಸೆಕ್ಷನ್ನಲ್ಲಿ ಬಂಧಿಸಲಾಗಿದೆ. ನ್ಯೂ ಇಂಡಿಯಾದಲ್ಲಿ ಸಾಂತ್ವಾನ ಹೇಳುವುದನ್ನ ಶಾಂತಿಭಂಗ ಎಂದು ತಿಳಿಯಲಾಗಿದೆಯೇ? ಶಾಂತಿಭಂಗಕ್ಕೆ ಪ್ರಚೋದಿಸಿದ ಹರಿಯಾಣ ಸಿಎಂ, ಕೇಂದ್ರ ಮಂತ್ರಿ ಅಜಯ್ ಮಿಶ್ರಾ, ಹಾಗೂ ಪುತ್ರನನ್ನು ಬಂಧಿಸದಿರುವುದೇಕೆ?" ಎಂದು ಕೇಳಿತ್ತು.