ಬೆಂಗಳೂರು, ಅ.06 (DaijiworldNews/PY): "ರೈತರ ಬಗ್ಗೆ ಕಾಳಜಿ ಇದೆ ಎಂದು ಹೇಳುತ್ತಾರೆ. ಆದರೆ, ರಸ್ತೆಗೆ ಬಂದರೆ ಹುಷಾರು ಎನ್ನುತ್ತಾರೆ ಎಂದು ಎಚ್ಚರಿಕೆ ನೀಡುತ್ತಾರೆ. ಒಬ್ಬ ಸಿಎಂ ಹಾಗೂ ಗೃಹ ಸಚಿವ ಈ ರೀತಿಯಾದ ಬೆದರಿಕೆ ಹಾಕಬಹುದಾ?" ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಉತ್ತರ ಪ್ರದೇಶದಲ್ಲಿ ನಾಲ್ಕು ಜನ ರೈತರ ಮೇಲೆ ಗಾಡಿ ಹರಿಸಿ ಕೊಂದಿದ್ದಾರೆ. ಆದರೆ, ಕೆಲ ನಾಯಕರು ನಾವು ರೈತ ಪೈರ ಎನ್ನುತ್ತಾರೆ, ಮತ್ತೆ ರೈತರು ರಸ್ತೆಗೆ ಬಂದರೆ ಪಾಠ ಕಲಿಸುತ್ತೇವೆ ಎಂದು ಯೋಗಿ ಹಾಗೂ ಖಟ್ಟರ್ನಂತಹ ನಾಯಕರು ರೈತರಿಗೆ ಎಚ್ಚರಿಕೆ ನೀಡಿದ್ದಾರೆ" ಎಂದು ವಾಗ್ದಾಳಿ ನಡೆಸಿದ್ದಾರೆ.
"ಸ್ವತಃ ಮುಖ್ಯಮಂತ್ರಿಗಳು ಈ ರೀತಿಯಾದ ಹೇಳಿಕೆ ನೀಡುತ್ತಾರೆ. ಸಿಎಂ ಅವರು ಈ ರೀತಿಯಾದ ಹೇಳಿಕೆ ನೀಡುವುದು ಎಷ್ಟು ಸರಿ?. ಯುಪಿ ಹಾಗೂ ಹರಿಯಾಣ ಸರ್ಕಾರ ಯಾವ ರೀತಿಯಾಗಿ ದಬ್ಬಾಳಿಕೆ ಮಾಡುತ್ತಿದೆ ಎನ್ನುವುದಕ್ಕೆ ಲಖಿಂಪುರ್ ಘಟನೆ ಉದಾಹರಣೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಗೃಹ ಖಾತೆ ಸಚಿವರ ಮಗನನ್ನು ಕೇಂದ್ರ ಸರ್ಕಾರ ಏಕೆ ಇನ್ನೂ ಬಂಧಿಸಿಲ್ಲ?. ಸಾಂತ್ವಾನ ಹೇಳಲು ಹೋದವರನ್ನು ಬಂಧಿಸಿ ಗೃಹ ಬಂಧನದಲ್ಲಿಡಲಾಗುತ್ತದೆ. ಬೇರೆ ಪಕ್ಷದ ನಾಯಕರಿಗೆ ಅಲ್ಲಿಗೆ ಭೇಟಿ ನೀಡಲು ಅವಕಾಶವಿದೆ. ಅಲ್ಲಿನ ಸಿಎಂಗೆ ಭೇಟಿ ಮಾಡಲು ಅವಕಾಶ ಕೊಟ್ಟಿದ್ದಾರೆ. ಆದರೆ, ಕಾಂಗ್ರೆಸ್ ಪಕ್ಷದವರಿಗೆ ಮಾತ್ರವೇ ಅವಕಾಶ ನೀಡದೇ ಬಂಧಿಸಲಾಗುತ್ತಿದೆ" ಎಂದು ಕಿಡಿಕಾರಿದ್ದಾರೆ.
"ಈ ಘಟನೆ ಬಗ್ಗೆ ಸುಪ್ರೀಂ ಕೋರ್ಟ್ ಸಿಟ್ಟಿಂಗ್ ಜಡ್ಜ್ ಅವರಿಂದ ತನಿಖೆ ನಡೆದರೆ ಸತ್ಯ ಏನೆಂದು ತಿಳಿಯುತ್ತದೆ. ಗೋಲ್ವಾಲ್ಕರ್ ಯಾರು? ಅದರ ಪ್ರತಿಪಾದಕ. ಆರ್ಎಸ್ಎಸ್ ಏನು ಪ್ರತಿಪಾದಿಸುತ್ತದೆ. ಮನಿಸ್ಮೃತಿ ಏನು ಪ್ರತಿಪಾದಿಸುತ್ತದೆ?. ನನ್ನ ಸೋಲಿಗೆ ಆರ್ಎಸ್ಎಸ್ ಕೂಡಾ ಕಾರಣ" ಎಂದು ಹೇಳಿದ್ದಾರೆ.