ಬೆಂಗಳೂರು, ಅ.06 (DaijiworldNews/PY): ಆರ್ಎಸ್ಎಸ್ ಬಗ್ಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿರುವ ನಟ ಜಗ್ಗೇಶ್, "ನಾನು ಕಂಡ ಆರ್ಎಸ್ ಎಸ್ ಜಾತಿ ಧರ್ಮ ಮೀರಿದ ಮಾತೃಹೃದಯಿ ಸಂಘಟನೆ. ಜಗದಲ್ಲಿ ನಿಸ್ವಾರ್ಥಸೇವೆ ಮಾಡುವ ಮಾತೃಹೃದಯಿ ಸಂಸ್ಥೆ" ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಆ ಸಂಸ್ಥೆಯ ಸಂಪರ್ಕ ದೊರಕಿದರೆ ಅಂಥವರು ತಮಗರಿಯದೆ ಸಾತ್ವಿಕನಾಗಿ ಸ್ವಾರ್ಥಬಿಟ್ಟು ಸಮಾಜಕ್ಕೆ ಹೆಗಲುಕೊಡುವ ಕರ್ಮಯೋಗಿ ಆಗುತ್ತಾನೆ. ದೂರನಿಂತು ಬೆಟ್ಟ ನೋಡುವರಿಗು ಆ ಬೆಟ್ಟ ಏರಿದವರಿಗು ವಿವರಣೆಗೆ ವ್ಯತಾಸವುಂಟು!ನೋಡುಗರಿಗಿಂತ ಅದರ ಸಾಂಗತ್ಯ ಇರುವವರ ಸಂಖ್ಯೆ ಹೆಚ್ಚು ಕಾರಣ ಅದರ ಮಾತೃರೂಪ ಹಾಗು ಸರ್ವಸಂಗ ಪರಿತ್ಯಾಗಿಗಳು ಕಟ್ಟಿದ ನಿಸ್ವಾರ್ಥ" ಎಂದು ತಿಳಿಸಿದ್ದಾರೆ.
"ನಾನು ಕಂಡ ಆರ್ ಎಸ್ ಎಸ್ ಜಾತಿ ಧರ್ಮ ಮೀರಿದ ಮಾತೃಹೃದಯಿ ಸಂಘಟನೆ ಕೊರೋನ ಸಂದರ್ಭವಾಗಲಿ ನೆರೆಬಂದ ಸಂದರ್ಭವಾಗಲಿ ರಾಷ್ಟ್ರಕ್ಕೆ ಸಂಕಷ್ಟ ಬಂದಾಗ ಆಗಲಿ, ವಿದ್ಯೆ ದಾನಕ್ಕಾಗಲಿ, ಅನ್ನದ ಮಾರ್ಗಕ್ಕಾಗಲಿ ಶಿಸ್ತಿನ ಸೈನ್ಯ ಇಂಥ ಸ್ವಾರ್ಥ ಜಗದಲ್ಲಿ ನಿಸ್ವಾರ್ಥಸೇವೆ ಮಾಡುವ ಮಾತೃಹೃದಯಿ ಸಂಸ್ಥೆ ಎಂದರೆ ಅದು ಒಂದೆ ಆರ್ಎಸ್ಎಸ್. ಯಾರಿಗೆ ಸಂಘವಿದು. ಆ ಸಂಘದಲ್ಲಿ ಅದರ ಸಿದ್ಧಾಂತ ಅಪ್ಪಿ ಜೀವಿಸುವವರು ವಿದ್ಯಾವಂತರು ರಾಷ್ಟ್ರಪ್ರೇಮಿಗಳು, ಆತ್ಮಸಾಕ್ಷಾತ್ಕಾರ ಆದ ಶ್ವೇತವರ್ಣ ಸನ್ಯಾಸಿಗಳು. ಅವರಿಗೆ ದೇಶವೆ ಮನೆ ದೇಶವಾಸಿಗಳೆ ಬಂಧುಗಳು ಅವರ ನಿಸ್ವಾರ್ಥ ಸಮಾಜಸೇವೆಯೇ ದೇವರ ಪೂಜೆ..ಆ ಸಂಘದ ಬಗ್ಗೆ ಮಾತಾಡುವ ಮುನ್ನ ಅದರ ನಿಸ್ವಾರ್ಥಗುಣ ಅರಿಯಿರಿ" ಎಂದಿದ್ದಾರೆ.