ಮೈಸೂರು, ಅ.06 (DaijiworldNews/PY): "ರಾಜ್ಯ ಸರ್ಕಾರ ಆಡಳಿತ ಮೇಲೆ ಆರ್ಎಸ್ಎಸ್ನ ಯಾವುದೇ ಒತ್ತಡ ಇಲ್ಲ, ಕೇಂದ್ರ ಸರ್ಕಾರದ್ದು ನನಗೆ ತಿಳಿದಿಲ್ಲ" ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ.ಸೋಮಶೇಖರ್ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು ಆರ್ಎಸ್ಎಸ್ನ ಬಗ್ಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
"ಹೆಚ್ಡಿಕೆ ಅವರಿಗೆ ಮಾಹಿತಿ ಕೊರತೆ ಇದ್ದು, ಇದು ಚುನಾವಣಾ ದೃಷ್ಟಿಯಿಂದ ಹೇಳುತ್ತಿರಬಹುದು. ರಾಜ್ಯ ಸರ್ಕಾರದ ಮೇಲೆ ಯಾವುದೇ ಒತ್ತಡ ಇಲ್ಲ" ಎಂದಿದ್ದಾರೆ.
ಮೈಸೂರು ದಸರಾ ಸಿದ್ಧರೆ ವಿಚಾರದ ಕುರಿತು ಮಾತನಾಡಿದ ಅವರು, "ಚಾಮುಂಡಿ ಬೆಟ್ಟದಲ್ಲಿ ಉದ್ಘಾಟನಾ ಸಮಾರಂಭದ ಸಂಪೂರ್ಣ ಸಿದ್ಧತೆ ಈಗಾಗಲೇ ಮುಗಿದಿದೆ. ನಾಳೆಯಿಂದ ಅರಮನೆ ಆವರಣದಲ್ಲೂ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಾರಂಭವಾಗಲಿವೆ. ಈ ಬಾರಿಯ ಜಂಬೂಸವಾರಿ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶವಿಲ್ಲ. ಕೇವಲ ಪ್ರತಿನಿಧಿಗಳಿಗೆ, ಪೊಲೀಸರಿಗೆ, ಮಾಧ್ಯಮ ಪ್ರತಿನಿಧಿಗಳಿಗೆ ಮಾತ್ರವೇ ಅರಮನೆ ಪ್ರವೇಶಕ್ಕೆ ಅವಕಾಶ ಇದೆ. ಸಾರ್ವಜನಿಕರು ಆನ್ಲೈನ್ನಲ್ಲಿ ದಸರಾ ವೀಕ್ಷಣೆ ಮಾಡಬೇಕಾಗಿದೆ" ಎಂದು ತಿಳಿಸಿದ್ದಾರೆ.