ನವದೆಹಲಿ, ಅ.06 (DaijiworldNews/PY): "ಎಲ್ಲಾ ಸರ್ಕಾರಿ ಹುದ್ದೆಗಳಿಗೆ ಅನುಕಂಪದ ನೇಮಕಾತಿ ರಿಯಾಯಿತಿಯಾಗಿದೆ. ಆದರೆ, ಅದು ಅಧಿಕಾರ ಅಲ್ಲ" ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಸಹಾಭೂತಿ ನೇಮಕಾತಿಯ ಕುರಿತು ಈ ನ್ಯಾಯಾಲಯದ ತೀರ್ಮಾನಗಳ ಆದೇಶದಲ್ಲಿ ರೂಪಿಸಲಾದ ಕಾನೂನಿ ಪ್ರಕಾರ, "ಎಲ್ಲ ಅಭ್ಯರ್ಥಿಗಳಿಗೆ ಸಮನ ಅವಕಾಶ ನೀಡಬೇಕು. ಮೃತ ಉದ್ಯೋಗಿ ಅವಲಂಬಿತರಿಗೆ ಸಹಾನುಭೂತಿ ನೇಮಕಾತಿಯ ಪ್ರಸ್ತಾಪವು ಈ ನಿಯಮಗಳುಗೆ ಅಪವಾದವಾಗಿದೆ. ಸಹಾನುಭೂತಿಯ ಆಧಾರವು ರಿಯಾಯಿತಿಯಾಗಿದ್ದು, ಅದು ಹಕ್ಕು ಅಲ್ಲ" ಎಂದಿದೆ.
"ಸಂವಿಧಾನದ ಅನುಚ್ಛೇದ 14 ಹಾಗೂ 16ರ ಅಡಿಯಲ್ಲಿ, ಎಲ್ಲಾ ಸರ್ಕಾರಿ ಹುದ್ದೆಗಳಿಗೆ ಅನುಕಂಪದ ಆಧಾರದ ನೇಮಕಾತಿಯಲ್ಲಿ ಎಲ್ಲಾ ಅಭ್ಯರ್ಥಿಗಳಿಗೆ ಸಮಾನವಾದ ಅವಕಾಶವನ್ನು ನೀಡಬೇಕು" ಎಂದು ನ್ಯಾಯಾಲಯ ತಿಳಿಸಿದೆ.
ನ್ಯಾಯಪೀಠ ಉತ್ತರ ಪ್ರದೇಶ ಸರ್ಕಾರದ ಮೇಲ್ಮನವಿಯನ್ನು ಅಂಗೀಕರಿಸಿದ್ದು, ಗ್ರೇಡ್-3 ಸೇವೆಯಲ್ಲಿ ಅನುಕಂಪದ ನೇಮಕಾತಿಗಾಗಿ ಮಹಿಳೆಯ ಉಮೇದುವಾರಿಕೆಯನ್ನು ಪರಿಗಣಿಸುವಂತೆ ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿದ ಅಲಹಾಬಾದ್ ಹೈಕೋರ್ಟ್ನ ನ್ಯಾಯಪೀಠದ ಆದೇಶವನ್ನು ರದ್ದುಗೊಳಿಸಿತು.