ನವದೆಹಲಿ ಅ 06 (DaijiworldNews/MS): ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್ ದರದಲ್ಲಿ ಬುಧವಾರ ಮತ್ತೆ ಏರಿಕೆಯಾಗಿದೆ. ಈಗ ಎಲ್ಪಿಜಿ ದರ ರೂ. 15ರಷ್ಟು ಹೆಚ್ಚಳ ಮಾಡುವ ಮೂಲಕ ಪ್ರತಿ ಸಿಲಿಂಡರ್ ಬೆಲೆ ರೂ. 900 ಸಮೀಪಿಸಿದೆ.ಎರಡು ತಿಂಗಳಲ್ಲಿ ಇದು ನಾಲ್ಕನೇ ಸತತ ದರ ಹೆಚ್ಚಳವಾಗಿದೆ.
ಹೊಸ ಏರಿಕೆಯ ನಂತರ, ಈಗ ದೆಹಲಿಯಲ್ಲಿ ಎಲ್ಪಿಜಿ ಸಿಲಿಂಡರ್ಗಳ ಬೆಲೆ ಪ್ರತಿ ಸಿಲಿಂಡರ್ಗೆ ರೂ 884.50 ರಿಂದ ರೂ 899.50 ಕ್ಕೆ ಏರಿಕೆಯಾಗಿದೆ.5 ಕೆಜಿ ಎಲ್ಪಿಜಿ ಸಿಲಿಂಡರ್ಗೆ ₹502 ಆಗಿದ್ದು, ಇವತ್ತಿನಿಂದಲೇ ಹೊಸ ದರ ಅನ್ವಯವಾಗಿದೆ.ಮಂಗಳವಾರ ಇಂಧನ ದರ ಏರಿಕೆಯಾದ ಬೆನ್ನಲ್ಲೇ ಅನಿಲ ದರದಲ್ಲೂ ಹೆಚ್ಚಳವಾಗಿದೆ.
ದೇಶಾದ್ಯಂತ ಇಂದು ಕೂಡ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಮತ್ತೆ ಏರಿಕೆ ಕಂಡಿದ್ದು, ದಾಖಲೆ ಮಟ್ಟಕ್ಕೆ ತಲುಪಿದೆ. ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ 102.39 ರೂಪಾಯಿ ಮತ್ತು ಡೀಸೆಲ್ 90.77 ರೂಪಾಯಿ ತಲುಪಿತ್ತು. ಬುಧವಾರ ಮತ್ತೆ ಪೆಟ್ರೋಲ್, ಡೀಸೆಲ್ ದರ ಹೆಚ್ಚಳವಾಗಿದೆ. ದೆಹಲಿಯಲ್ಲಿ ಪೆಟ್ರೋಲ್ ದರ 30 ಪೈಸೆ ಹೆಚ್ಚಳವಾಗಿ ₹102.94 ಮತ್ತು ಡೀಸೆಲ್ 35 ಪೈಸೆ ಹೆಚ್ಚಳವಾಗಿ ₹91.42 ಆಗಿದೆ. ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ಗೆ ₹108.96, ಡೀಸೆಲ್ಗೆ ₹99.17; ಚೆನ್ನೈನಲ್ಲಿ ಪೆಟ್ರೋಲ್ ₹100.49, ಡೀಸೆಲ್ ₹95.93; ಕೋಲ್ಕತ್ತದಲ್ಲಿ ಪೆಟ್ರೋಲ್ ಬೆಲೆ ₹103.65 ಮತ್ತು ಡೀಸೆಲ್ ಬೆಲೆ ₹94.53 ಹಾಗೂ ಬೆಂಗಳೂರಿನಲ್ಲಿ ಪೆಟ್ರೋಲ್ ₹106.52, ಡೀಸೆಲ್ ₹97.03 ತಲುಪಿದೆ.