ಚಂಡೀಘಡ, ಅ. 05 (DaijiworldNews/SM): ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಭೇಟಿಯನ್ನು ವಿರೋಧಿಸಿ ರವಿವಾರ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಮೃತಪಟ್ಟ ಕುಟುಂಬ ಸದಸ್ಯರನ್ನು ಭೇಟಿಯಾಗಲು ತೆರಳುತ್ತಿದ್ದ ಪ್ರಿಯಾಂಕಾ ಗಾಂಧಿ ಅವರನ್ನು ಬಂಧಿಸಲಾಗಿದ್ದು, ಬುಧವಾರದೊಳಗೆ ಪ್ರಿಯಾಂಕಾ ಗಾಂಧಿ ಅವರನ್ನು ಬಿಡುಗಡೆ ಮಾಡದಿದ್ದರೆ ಉತ್ತರ ಪ್ರದೇಶದ ಲಖೀಂಪುರ್ ಖೇರ್ ಕಡೆಗೆ ಪಂಜಾಬ್ ಕಾಂಗ್ರೆಸ್ ಬರಲಿದೆ ಎಂದು ನವಜೋತ್ ಸಿಂಗ್ ಸಿಧು ಎಚ್ಚರಿಕೆ ನೀಡಿದ್ದಾರೆ.
ಸೋಮವಾರದಂದು ಪ್ರೀಯಾಂಕಾ ಗಾಂಧಿಯನ್ನು ಸೀತಾಪುರ ಬಳಿಯಿಂದ ಬಂಧಿಸಲಾಗಿತ್ತು. ಇದೀಗ ಬುಧವಾರದೊಳಗೆ ಬಿಡುಗಡೆಗೊಳಿಸುವಂತೆ ಗಡುವು ನೀಡಲಾಗಿದೆ. ಅಲ್ಲದೆ, ಪ್ರೀಯಾಂಕಾ ಗಾಂಧಿ ಬಂಧನವನ್ನು ಕಾಂಗ್ರೆಸ್ ಖಂಡಿಸಿದೆ. ಈ ನಡುವೆ ಶಾಂತಿ ಉಲ್ಲಂಘನೆಯ ಆರೋಪದಡಿ ಪ್ರೀಯಾಂಕ ವಿರುದ್ಧ ಕೇಸು ದಾಖಲಾಗಿದೆ ಎಂದು ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನೊಂದೆಡೆ ನಾಳೆಯೊಳಗೆ ರೈತರ ಬರ್ಬರ ಹತ್ಯೆಗಾಗಿ ಕೇಂದ್ರ ಸಚಿವರ ಪುತ್ರನನ್ನು ಬಂಧಿಸಬೇಕೆಂದು ಕಾಂಗ್ರೆಸ್ ಒತ್ತಾಯಿಸಿದೆ.