ದೆಹಲಿ, ಅ 05 (DaijiworldNews/MS): ಛತ್ರಸಾಲ ಸ್ಟೇಡಿಯಂ ಕೊಲೆ ಪ್ರಕರಣದಲ್ಲಿ ಜಾಮೀನು ಕೋರಿ ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್ ಸೋಮವಾರ ದೆಹಲಿ ನ್ಯಾಯಾಲಯದ ಮೊರೆ ಹೋಗಿದ್ದಾರೆ, ಪೊಲೀಸರು ಸುಳ್ಳು ಪ್ರಕರಣವನ್ನು ದಾಖಲಿಸಿ ತನ್ನನ್ನು "ತಪ್ಪಿತಸ್ಥ" ಎಂದು ಪ್ರಸ್ತುತಪಡಿಸಿದ್ದಾರೆ ಎಂದು ಹೇಳಿದ್ದಾರೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದಲ್ಲಿ ಮನವಿ ಮಾಡಿರುವ ಸುಶೀಲ್, ಉದಯೋನ್ಮುಖ ಕುಸ್ತಿಪಟು ಸಾಗರ್ ಧಂಕರ್ ಮರಣವನ್ನಿಪ್ಪಿರುವುದು ದುರದೃಷ್ಟಕರ. ಆದರೆ ಈ ಪ್ರಕರಣವನ್ನು ಅತಿಯಾಗಿ ವಿಜೃಂಭಿಸಲಾಗಿದೆ, ತನ್ನನ್ನು ಬಲಿ ಪಶುವಾಗಿಸಲು ಇದನ್ನು ಬಳಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ
ಸುಶೀಲ್ ಕುಮಾರ್ ಹಾಗೂ ಅವರ ಇತರ ಜೂನಿಯರ್ ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಸಾಗರ್ ಧಂಕರ್ ಮತ್ತು ಅವರ ಸ್ನೇಹಿತರ ಮೇಲೆ ಮೇ ತಿಂಗಳಲ್ಲಿ ಕ್ರೀಡಾ ವೈಮನಸ್ಸಿನ ಹಿನ್ನಲೆಯಲ್ಲಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ
ಸುಶೀಲ್ರನ್ನು ಜಾಮೀನಿನ ಮೇಲೆ ಹೊರತರ ಬಾರದು. ಈ ಕೊಲೆ ಪ್ರಕರಣದಲ್ಲಿ ಹಲವು ಕಿಡಿಗೇಡಿಗಳು ಇನ್ನೂ ಬಂಧನಕ್ಕೊಳಗಾಗಿಲ್ಲ. ಒಂದು ವೇಳೆ ಸುಶೀಲ್ ಹೊರಹೋದರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ ದೂರುದಾರ ಸೋನು ವಾದಿಸಿದ್ದಾರೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಶಿವಾಜಿ ಆನಂದ್ ಮಂಗಳವಾರ ಜಾಮೀನು ಅರ್ಜಿಯ ವಿಚಾರಣೆ ನಡೆಸಲಿದ್ದಾರೆ.