ನವದೆಹಲಿ, ಅ. 05 (DaijiworldNews/HR): ಪ್ರಿಯಾಂಕಾ ವಾದ್ರಾ ನಿರ್ಭೀತ ಮತ್ತು ನೈಜ ಕಾಂಗ್ರೆಸ್ಸಿಗಳು. ಆಕೆ ಎಂದೂ ಸೋಲನ್ನು ಸ್ವೀಕರಿಸುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಇತ್ತೀಚೆಗೆ ಹಿಂಸಾರ ನಡೆದಿದ್ದ ಉತ್ತರ ಪ್ರದೇಶದ ಲಖಿಂಪುರ ಜಿಲ್ಲೆಗೆ ತೆರಳುತ್ತಿದ್ದ ಪ್ರಿಯಾಂಕಾ ವಾದ್ರಾ ಅವರನ್ನು ಸೋಮವಾರ ಮಾರ್ಗ ಮಧ್ಯೆ ಸೀತಾಪುರದಲ್ಲಿ ಪೊಲೀಸರು ಬಂಧಿಸಿದ್ದರು.
ಇನ್ನು ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ಗಾಂಧಿ, 'ನಮ್ಮ ಸತ್ಯಾಗ್ರಹ ನಿಲ್ಲುವುದಿಲ್ಲ' ಎಂದು ಫಾರ್ಮರ್ಸ್ ಪ್ರೊಟೆಸ್ಟ್' ಹ್ಯಾಶ್ಟ್ಯಾಗ್ ಬಳಸಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.