ಭೋಪಾಲ್ , ಅ 05 (DaijiworldNews/MS): ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಅವರ ಪಕ್ಷದ ಇತರರಿಗೆ ರೈತರು ಮತ್ತು ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ಹಕ್ಕಿಲ್ಲ ಎಂದು ಹಿರಿಯ ಬಿಜೆಪಿ ನಾಯಕಿ ಉಮಾಭಾರತಿ ಹೇಳಿದ್ದಾರೆ.
ಉತ್ತರಪ್ರದೇಶದ ಲಖಿಂಪುರ್ ಖೇರಿ ಜಿಲ್ಲೆಯಲ್ಲಿ ಇತ್ತೀಚಿನ ಹಿಂಸಾಚಾರದ ಹಿನ್ನೆಲೆಯ ವಿಚಾರವಾಗಿ ಸರಣಿ ಟ್ವಿಟರ್ ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವ " ಉತ್ತರ ಪ್ರದೇಶದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಮತ್ತು ಇತರ ಕಾಂಗ್ರೆಸ್ ನಾಯಕರು ಅವರು ರೈತರು ಮತ್ತು ಪ್ರಜಾಪ್ರಭುತ್ವ ಮಾತನಾಡುವ ವಿಷಯಗಳ ಬಗ್ಗೆ ಮಾತನಾಡುವ ಹಕ್ಕನ್ನು ಹೊಂದಿಲ್ಲ" ಎಂದು ಹೇಳಿದರು.
ಸ್ವಾತಂತ್ರ್ಯ ಬಂದ ತಕ್ಷಣ, (ಮಹಾತ್ಮ) ಗಾಂಧಿ-ಜಿ ಅವರ ಕೃಷಿಯನ್ನು ದೇಶದ ಮುಖ್ಯ ಆರ್ಥಿಕ ಆಧಾರವಾಗಿ ಪರಿಗಣಿಸುವ ಕನಸು ಕಂಡಿದ್ದು , ಆ ಕನಸನ್ನು ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ನಾಶಮಾಡಿಬಿಟ್ಟರು. ಇದೇ ಕೃಷಿ ಮತ್ತು ರೈತರು ಇಂದು ಕೂಡಾ ಹಿಂದುಳಿಯಲು ಕಾರಣ ಎಂದು ಆರೋಪಿಸಿದರು.
ದೇಶದಲ್ಲಿ ತುರ್ತುಪರಿಸ್ಥಿತಿ ಹೇರಿದ ಕಾಂಗ್ರೆಸ್, ಪ್ರಜಾಪ್ರಭುತ್ವ ಪದವನ್ನು ಉಚ್ಚರಿಸುವ ಹಕ್ಕನ್ನು ಕಳೆದುಕೊಂಡಿದೆ . ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು 10,000 ಸಿಖ್ಖರನ್ನು ಜೀವಂತವಾಗಿ ಸುಟ್ಟುಹಾಕಿದ್ದಾರೆ. ಹಾಗಾಗಿ, ಅಹಿಂಸೆ ಎಂಬ ಪದವು ಕಾಂಗ್ರೆಸ್ಗೆ ಸರಿಹೊಂದುವುದಿಲ್ಲ" ಎಂದು ಅವರು ಟೀಕಿಸಿದರು.