ನವದೆಹಲಿ, ಅ 05 (DaijiworldNews/MS): ಜಗತ್ತಿನಾದ್ಯಂತ ವಾಟ್ಸ್ ಆಯಪ್ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಸ್ಥಗಿತಗೊಂಡು ಭಾರೀ ತೊಂದರೆ ಆಗಿದ್ದು, ಬಳಕೆದಾರರು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಿಗೆ ಭಾಗಶಃ ಆರು ಗಂಟೆಗಳ ನಂತರ ಪ್ರವೇಶಿಸದ್ದಾರೆ.
ಜಗತ್ತಿನ ಪ್ರಮುಖ ಜಾಲತಾಣಗಳಾದ ಫೇಸ್ ಬುಕ್, ವಾಟ್ಸ್ ಆಯಪ್ ಮತ್ತು ಇನ್ ಸ್ಟಾಗ್ರಾಂ ಸೋಮವಾರ ಸ್ಥಗಿತಗೊಂಡಿದ್ದು, ಜಾಗತಿಕ ವೈಫಲ್ಯ ಮತ್ತು ತಾಂತ್ರಿಕ ವೈಫಲ್ಯವು ಈ ಸಂಸ್ಥೆಗಳ ಸೇವೆ ನೀಡಲು ಅಡ್ಡಿಪಡಿಸಿತು.
ಅಮೆರಿಕದ ಅಂತರ್ಜಾಲ ದೈತ್ಯ ಫೇಸ್ಬುಕ್ ಒಡೆತನದ ವೇದಿಕೆಗಳು ರಾತ್ರಿ 9 ರ ಸುಮಾರಿಗೆ (ಭಾರತೀಯ ಕಾಲಮಾನ) ಸ್ಥಗಿತಗೊಂಡವು ಮತ್ತು ಲಕ್ಷಾಂತರ ಬಳಕೆದಾರರು ತಾಜಾ ಸಂದೇಶಗಳನ್ನು ಲೋಡ್ ಮಾಡಲಾಗುತ್ತಿಲ್ಲ ಎಂದು ದೂರಿದ್ದರು.ಈ ಮೂರೂ ಸಂಸ್ಥೆಗಳ ಒಡೆತನ ಹೊಂದಿರುವ ಫೇಸ್ಬುಕ್, ಈ ಸಮಸ್ಯೆ ಕುರಿತಂತೆ ಸೋಮವಾರ ರಾತ್ರಿ ಟ್ವೀಟ್ ಮಾಡಿ, ''ಕ್ಷಮಿಸಿ, ಏನೋ ಸಮಸ್ಯೆಯಾಗಿದೆ. ನಮ್ಮ ಎಲ್ಲಾ ಸಾಮಾಜಿಕ ಜಾಲತಾಣಗಳು ಏಕಾಏಕಿ ನಿಷ್ಕ್ರಿಯವಾಗಿವೆ. ಈ ಸಮಸ್ಯೆ ಪರಿಹರಿಸಲು ನಾವು ಶ್ರಮಿಸುತ್ತಿದ್ದೇವೆ. ಎಷ್ಟು ಸಾಧ್ಯವೋ ಅಷ್ಟು ಬೇಗನೇ ಇದನ್ನು ನಿವಾರಿಸುತ್ತೇವೆ' ಎಂದು ಹೇಳಿತ್ತು.
ಸುಮಾರು 2 ಬಿಲಿಯನ್ ದೈನಂದಿನ ಸಕ್ರಿಯ ಬಳಕೆದಾರರನ್ನು ಹೊಂದಿರುವ ಫೇಸ್ಬುಕ್ನ ಷೇರುಗಳು ಸೋಮವಾರ 4.9% ರಷ್ಟು ಕುಸಿದವು, ತಂತ್ರಜ್ಞಾನದ ಸ್ಟಾಕ್ಗಳಲ್ಲಿ ವ್ಯಾಪಕವಾದ ಮಾರಾಟವಾಗಿದೆ.