ನವದೆಹಲಿ,ಅ 05 (DaijiworldNews/MS): ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ಹಿಂಸಾಚಾರಕ್ಕೆ ಕಾರಣವಾದ ಘಟನೆಯ ವಿಡಿಯೋ ಎಂದು ಹೇಳಿರುವ ಕಾಂಗ್ರೆಸ್ ಪಕ್ಷವು ಸೋಮವಾರ ತನ್ನ ಟ್ವಿಟರ್ನ ಅಧಿಕೃತ ಖಾತೆಯಲ್ಲಿ ಪೋಸ್ಟ್ ಮಾಡಿದೆ. ಮಾತ್ರವಲ್ಲದೆ . "ಮೋದಿ ಸರ್ಕಾರದ ಮೌನವು ಅವರನ್ನು ಈ ಘಟನೆಯ ಪಾಲುದಾರರನ್ನಾಗಿ ಮಾಡುತ್ತದೆ?" ಎಂದು ಪ್ರಶ್ನಿಸಿದೆ.
ಕಾಂಗ್ರೆಸ್ ಪೋಸ್ಟ್ ಮಾಡಿರುವ ವಿಡಿಯೊದಲ್ಲಿ, ಪ್ರತಿಭಟನಾ ನಿರತ ರೈತರ ಗುಂಪು ರಸ್ತೆಯ ಉದ್ದಕ್ಕೂ ನಡೆದುಕೊಂಡು ಹೋಗುತ್ತಿರುವಾಗ ಹಿಂಬದಿಯಿಂದ ಬಂದ ಜೀಪ್ ಅವರ ಮೇಲೆಯೇ ಹತ್ತಿಸಿರುವುದು ಕಾಣಬಹುದು. ಇತರರು ತಮ್ಮನ್ನು ರಕ್ಷಿಸಿಕೊಳ್ಳಲು ಬದಿಗೆ ಜಿಗಿಯುವಾಗ, ಬಿಳಿ ಶರ್ಟ್ ಮತ್ತು ಹಸಿರು ಪೇಟ ಧರಿಸಿದ ಓರ್ವ ಮಧ್ಯವಯಸ್ಕ ರೈತ ಜೀಪ್ನ ಬಾನೆಟ್ನಲ್ಲಿ ಮೇಲೆಯೇ ಬೀಳುವುದನ್ನು ಈ ವೀಡಿಯೊ ಸ್ಪಷ್ಟವಾಗಿ ತೋರಿಸುತ್ತದೆ.
ಈ ವೇಳೆ ಗಾಯಗೊಂಡವರನ್ನು ಪರೀಕ್ಷಿಸಲು ನಿಲ್ಲಿಸದೆ, ಜೀಪ್ ಮುಂದಕ್ಕೆ ಚಲಿಸಿಹೋಗುತ್ತದೆ.ಆ ಬಳಿಕ ಅದರ ಹಿಂದೆ ಕಪ್ಪು ಬಣ್ಣದ ಎಸ್ಯುವಿ ಎರಡು ವಾಹನಗಳು ಮುಂದೆ ಸಾಗುತ್ತದೆ ಈ ವೇಳೆ ರಸ್ತೆಯ ಬದಿಯಲ್ಲಿ ಕನಿಷ್ಠ ಐದಾರು ಮಂದಿ ಬಿದ್ದಿರುವುದನ್ನು ಕಾಣಬಹುದಾಗಿದೆ.
ಕಾಂಗ್ರೆಸ್ ಪಕ್ಷವು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಈ ವೀಡಿಯೊದ ಸತ್ಯಾಸತ್ಯತೆ ಇನ್ನೂ ಸ್ಪಷ್ಟವಾಗಿಲ್ಲ.