ಬೆಂಗಳೂರು, ಅ.04 (DaijiworldNews/HR): ಜನರ ಸಮಸ್ಯೆ ಯನ್ನು ಎಸಿ ರೂಮ್ನಲ್ಲಿ ಕುಳಿತು ನಕ್ಷೆ ನೋಡಿ ಪರಿಹರಿಸುತ್ತೇವೆನ್ನುವುದು ಅಸಾಧ್ಯದ ಮಾತು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರಿನಲ್ಲಾದ ಮಳೆ ಅನಾಹುತ ಕುರಿತು ಮಾತನಾಡಿದ ಅವರು, "ಮಳೆ ಅನಾಹುತ ಬಗ್ಗೆ ಬಿಬಿಎಂಪಿ ಕಮಿಷನರ್ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಆದಷ್ಟು ಬೇಗ ನೀರನ್ನು ಹೊರಗೆ ತೆಗೆದು ವಾಹನ ಚಾಲನೆಗೆ ಸುಗಮ ಅವಕಾಶ ಮಾಡಿಕೊಡಲಾಗುವುದು. ಎಲ್ಲವನ್ನು ಪರಿವೀಕ್ಷಣೆ ಮಾಡಲಾಗುವುದು" ಎಂದರು.
ಇನ್ನು ಪರಿಹಾರ ಕೆಲಸಗಳನ್ನು ರಾತ್ರಿಯಿಂದಲೇ ಅಧಿಕಾರಿಗಳು ಕೈಗೊಳ್ಳುತ್ತಿದ್ದು, ರಾಜಕಾಲುವೆ, ಕೆರೆ, ತಗ್ಗುಪ್ರದೇಶದ ವಸತಿ ನಿವೇಶನಗಳ ಬಗ್ಗೆ ಕ್ರಮ ಕೈಗೊಂಡು ನಗರವನ್ನು ಸುರಕ್ಷಿತ, ಹಸಿರು ನಗರ ಮಾಡಲು ಕ್ರಮಕೈಗೊಳ್ಳುತ್ತೇವೆ ಎಂದುಹೇಳಿದ್ದಾರೆ.