ಗಾಂಧಿನಗರ, ಅ.04 (DaijiworldNews/HR): ಗುಜರಾತ್ನಲ್ಲಿ ಗಂಡನೊಬ್ಬ ಊಟ ಕೊಡಿಸುತ್ತೇನೆಂದು ಹೇಳಿ ಹೆಂಡತಿಯನ್ನು ಹೋಟೆಲ್ಗೆ ಕರೆದುಕೊಂಡು ಹೋಗಿ 500 ರೂಪಾಯಿಗೆ ಮಾರಿದ ಘಟನೆ ನಡೆದಿದೆ.
ಸಾಂದರ್ಭಿಕ ಚಿತ್ರ
ಊಟ ಕೊಡಿಸುತ್ತೇವುದಾಗಿ ಪತ್ನೊಯನ್ನು ಹೋಟೆಲ್ಗೆ ಕರೆದುಕೊಂಡು ಹೋಗಿದ್ದ ಗಂಡ ಅಲ್ಲಿ ಸೋನು ಶರ್ಮ ಎಂಬಾತನಿಗೆ 500 ರೂ.ಗೆ ತನ್ನ ಹೆಂಡತಿಯನ್ನು ಮಾರಾಟ ಮಾಡಿದ್ದಾನೆ.
ಇನ್ನು ಮಹಿಳೆಯನ್ನು ಖರೀದಿಸಿದ ವ್ಯಕ್ತಿ ನಿರ್ಜನ ಪ್ರದೇಶಕ್ಕೆ ಆಕೆಯನ್ನು ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದಾನೆ ಎಂದು ವರದಿಯಾಗಿದೆ.
ಹೋಟೆಲ್ಗೆ ಬಂದಿದ್ದ ವ್ಯಕ್ತಿಯ ಜೊತೆಗಿದ್ದ ಆತನ ಹೆಂಡತಿಯನ್ನು ನೋಡಿದ ಸೋನು ಶರ್ಮ ಆಕೆಯನ್ನು ತನಗೆ ಕೊಡಬೇಕೆಂದು ಕೇಳಿದ್ದ. ಅದಕ್ಕೆ ಒಪ್ಪಿದ ಆತ ಸೋನು ಶರ್ಮನಿಂದ 500 ರೂ. ಪಡೆದು ತನ್ನ ಹೆಂಡತಿಯನ್ನು ಆತನಿಗೆ ಮಾರಾಟ ಮಾಡಿದ್ದು, ಈ ಘಟನೆ ನಡೆದು 24 ಗಂಟೆಯೊಳಗೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.