ಮುಂಬೈ, ಅ 04 (DaijiworldNews/MS): ಡ್ರಗ್ಸ್, ಅಕ್ರಮ ಹಣ ದಂಧೆಯಲ್ಲಿ ತೊಡಗಿರುವ ಬಾಲಿವುಡ್ ಗೆ ಹಾಗೂ ಸೆಲೆಬ್ರಿಟಿಗಳ ಪಾಲಿಗೆ ದುಸ್ವಪ್ನದಂತೆ ಕಾಡುತ್ತಿರುವ ಅಧಿಕಾರಿ ಹೆಸರು ಕೇಳಿ ಬಾಲಿವುಡ್ ಬ್ಯಾಡ್ ಬಾಯ್ಸ್ ಬೆಚ್ಚಿಬಿದ್ರೆ , ಸಾಮಾನ್ಯ ಜನತೆ ಮಾತ್ರ ಅವರ ಬಗ್ಗೆ ಅಭಿಮಾನ ವ್ಯಕ್ತಪಡಿಸುತ್ತಿದ್ದಾರೆ. ಹೌದು ಅವರೇ ಭಾರತೀಯ ಕಂದಾಯ ಸೇವೆಯ( ಐಆರ್ ಎಸ್ ) ಅಧಿಕಾರಿ ಸಮೀರ್ ವಾಂಖೇಡೆ.!
ಶಾರುಖ್ಪುತ್ರನ ಕೇಸಿನೊಂದಿಗೆ ಮತ್ತೊಮ್ಮೆ ಭಾರೀ ಸುದ್ದಿಯಲ್ಲಿರುವ ಅಧಿಕಾರಿ ಸಮೀರ್ ವಾಂಖೇಡೆ ಯಾರು?
ಸಮೀರ್ ವಾಂಖೆಡೆ 2008 ರ ಬ್ಯಾಚ್ ಇಂಡಿಯನ್ ರೆವಿನ್ಯೂ ಸರ್ವೀಸ್ (IRS) ಅಧಿಕಾರಿಯಾಗಿದ್ದು, ಅವರು ಕೂಡಾ ಬಾಲಿವುಡ್ ಸಂಪರ್ಕವನ್ನು ಹೊಂದಿದ್ದಾರೆ.ಅವರು ಜನಪ್ರಿಯ ಮರಾಠಿ ನಟಿ ಕ್ರಾಂತಿ ರೆಡ್ಕರ್ ಅವರನ್ನು ವಿವಾಹವಾಗಿದ್ದಾರೆ, ಕ್ರಾಂತಿ 2003 ಚಲನಚಿತ್ರ ಗಂಗಾಜಲ್ನಲ್ಲಿ ನಟ ಅಜಯ್ ದೇವಗನ್ ಅವರೊಂದಿಗೆ ಕೆಲಸ ಮಾಡಿದ್ದಾರೆ. ಸಮೀರ್ ವಾಂಖೆಡೆ ಮತ್ತು ಕ್ರಾಂತಿ ರೆಡ್ಕರ್ ಮಾರ್ಚ್ 2017 ರಲ್ಲಿ ವಿವಾಹವಾಗಿದ್ದಾರೆ.
2008ನೇ ಬ್ಯಾಚ್ನ ಐಆರ್ಎಸ್ ಅಧಿಕಾರಿ ಸಮೀರ್, ಕಳೆದ 13 ವರ್ಷಗಳಲ್ಲಿ ನಾನಾ ಹುದ್ದೆಯನ್ನು ನಿರ್ವಹಿಸಿದ್ದಾರೆ. ಸಮೀರ್ ಹಾಗೂ ಅವರ ತಂಡ ಎರಡು ವರ್ಷಗಳಲ್ಲಿ ಸುಮಾರು 17,000 ಕೋಟಿ ರು ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡು ದಾಖಲೆ ಬರೆದಿದೆ. ಏರ್ ಇಂಟಲಿಜೆನ್ಸ್ ಯೂನಿಟ್ (ಎಐಯು) ಡೆಪ್ಯುಟಿ ಕಮಿಷನರ್, ರಾಷ್ಟ್ರೀಯ ತನಿಖಾ ದಳ(ಎನ್ಐಎ) ಎಸ್ ಪಿ, ಕಂದಾಯ ಇಲಾಖೆ ಗುಪ್ತಚರ ವಿಭಾಗದ ಜಂಟಿ ಆಯುಕ್ತ ಹಾಗೂ ಎನ್ ಸಿ ಬಿ ಪ್ರಾದೇಶಿಕ ನಿರ್ದೇಶಕ ಹುದ್ದೆಯನ್ನು ಸಮೀರ್ ನಿಭಾಯಿಸಿದ್ದಾರೆ.
ಸಮೀರ್ ಅವರ ಖಡಕ್ ಕಾರ್ಯವೈಖರಿ ಹಾಗೂ ಮುಲಾಜಿಲ್ಲದೇ ಸೆಲೆಬ್ರಿಟಿಗಳ ವಿರುದ್ಧ ಕೈಗೊಂಡ ಕ್ರಮಗಳು ನಿಜಕ್ಕೂ ಮೆಚ್ಚುವಂತವು. 2011ರಲ್ಲಿ ಭಾರತ ಕ್ರಿಕೆಟ್ ತಂಡ(Team India) ವಿಶ್ವಕಪ್ ಗೆದ್ದು ಮರಳಿದಾಗ, ಚಿನ್ನದ ಟ್ರೋಪಿಗೆ ವಿದೇಶಿ ಸುಂಕ ಕಟ್ಟುವವರೆಗೂ ಅದನ್ನು ಮುಂಬೈ ಏರ್ಪೋರ್ಟ್ನಿಂದ ಹೊರಗೆ ಕೊಂಡೊಯ್ಯಲು ಬಿಟ್ಟಿರದ ಅಧಿಕಾರಿ ಇವರು. ಇದು ಮಾತ್ರವಲ್ಲ 2013ರಲ್ಲಿ ಬಾಲಿವುಡ್ನ ಖ್ಯಾತ ಹಾಡುಗಾರ ಮಿಖಾ ಸಿಂಗ್ ವಿದೇಶಿ ಹಣದೊಂದಿಗೆ ಬಂದಿದ್ದಕ್ಕೆ ಬಂಧಿಸಿದ್ದರು. ಅಲ್ಲದೇ ಅನುರಾಗ್ ಕಶ್ಯಪ್, ವಿವೇಕ್ ಒಬೆರಾಯ್ , ರಾಮ್ ಗೋಪಾಲ್ ವರ್ಮ ಅವರಿಗೆ ಸೇರಿದ ಆಸ್ತಿಗಳ ಮೇಲೆ ದಾಳಿ ನಡೆಸಿದ್ದರು.
ಐಆರ್ಎಸ್ ಅಧಿಕಾರಿಯಾಗಿ, ಸಮೀರ್ ವಾಂಖೆಡೆ 2,000 ಕ್ಕೂ ಹೆಚ್ಚು ಸೆಲೆಬ್ರಿಟಿಗಳನ್ನು ತೆರಿಗೆ ಪಾವತಿಸದ ಕಾರಣಕ್ಕಾಗಿ ಕೇಸು ದಾಖಲಿಸಿದ್ದರು. ಸದ್ಯ ಡ್ರಗ್ಸ್ ದಂಧೆಯ ಹಿಂದೆ ಬಿದ್ದಿರುವ ಈ ಅಧಿಕಾರಿ ನಶೆಯಲ್ಲಿದ್ದ ಸೆಲೆಬ್ರಿಟಿಗಳಿಗೆ ಬಿಸಿ ಮುಟ್ಟುವಂತೆ ಮಾಡಿದ್ದಾರೆ.