ಚೆನ್ನೈ, ಅ.04 (DaijiworldNews/PY): ಜ್ಯೂಸ್ ಎಂದು ತಪ್ಪಾಗಿ ಭಾವಿಸಿ ಮದ್ಯ ಸೇವಿಸಿದ 5 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಅಣ್ಣಾನಗರದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಮೃತ ಬಾಲಕನನ್ನು ರಾಕೇಶ್ (5) ಎಂದು ಗುರುತಿಸಲಾಗಿದೆ.
ರಾಕೇಶ್ನ ತಾತ ಚಿನ್ನಸ್ವಾಮಿ (62) ಅವರಿಗೆ ಕುಡಿತದ ಚಟವಿತ್ತು. ಹಾಗಾಗಿ ಅವರು ಮನೆಯಲ್ಲಿಯೇ ಮದ್ಯದ ಬಾಟಲಿಯನ್ನು ತಂದು ಇಟ್ಟುಕೊಂಡಿದ್ದರು. ಇದನ್ನು ನೋಡಿದ ಬಾಲಕ ಜ್ಯೂಸ್ ಎಂದು ತಪ್ಪಾಗಿ ಭಾವಿಸಿ ಕುಡಿದಿದ್ದಾನೆ.
ಬಾಲಕ ಮದ್ಯ ಕುಡಿದಿದ್ದಾನೆ ಎಂದು ಯಾರಿಗೂ ತಿಳಿದಿರಲಿಲ್ಲ. ಬಳಿಕ ಬಾಲಕ ಆರೋಗ್ಯದಲ್ಲಿ ಏಕಾಏಕಿ ಏರುಪೇರು ಉಂಟಾಗಿದ್ದು, ಅದನ್ನು ಕಂಡು ಬಾಲಕನ ತಾತ ಚಿನ್ನಸ್ವಾಮಿ ಕೂಡಾ ಅನಾರೋಗ್ಯಕ್ಕೀಡಾದರು. ಇಬ್ಬರನ್ನೂ ಕೂಡಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಬ್ಬರೂ ಸಾವನ್ನಪ್ಪಿದ್ದಾರೆ.
ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಿದ್ದಾರೆ.