ಮುಂಬೈ ಅ 04 (DaijiworldNews/MS): ಡ್ರಗ್ ಪ್ರಕರಣದಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯುನ್ ಖಾನ್ ಬಂಧನವಾದ ಹಿನ್ನಲೆಯಲ್ಲಿ ಸ್ನೇಹಿತ ಶಾರುಖ್ ಖಾನ್ ಮನೆಗೆ ಬಾಲಿವುಡ್ ತಾರೆ ಸಲ್ಮಾನ್ ಖಾನ್ ಭೇಟಿ ನೀಡಿದ್ದಾರೆ.
ಸಲ್ಮಾನ್ ಖಾನ್ ಬ್ಯಾಂಡ್ಸ್ಟ್ಯಾಂಡ್ನ ಶಾರುಖ್ ಖಾನ್ ಬಂಗಲೆ ಮನ್ನತ್ಗೆ ಆಗಮಿಸುತ್ತಿರುವ ದೃಶ್ಯಾವಳಿಗಳನ್ನು ಮಾಧ್ಯಮಗಳು ಪ್ರಸಾರ ಮಾಡಿದೆ. ಅರಬ್ಬಿ ಸಮುದ್ರದಲ್ಲಿ ಸಂಚರಿಸುತ್ತಿದ್ದ ಕ್ರೂಸರ್ ಶಿಪ್ನಲ್ಲಿ ನಡೆದ ಪಾರ್ಟಿಯಲ್ಲಿ ಶಾರೂಖ್ ಖಾನ್ ಪುತ್ರ ಸೇರಿದಂತೆ ಹಲವರು ಭಾಗಿಯಾಗಿದ್ದರು. ಈ ವೇಳೆ ಎನ್ ಸಿಬಿ ಪೊಲೀಸರು ದಾಳಿ ಮಾಡಿದ್ದು, ನಿಷೇದಿತ ಮಾದಕ ವಸ್ತುಗಳು ಸಿಕ್ಕಿವೆ ಎಂದಿ ವರದಿಯಾಗಿದೆ. ಈ ಹಿನ್ನೆಲೆ ಆರ್ಯನ್ ಸೇರಿದಂತೆ ಹಲವರನ್ನು ಬಂಧಿಸಿದ್ದಾರೆ. ಆರ್ಯನ್ ಮತ್ತು ಇತರ ಇಬ್ಬರು ಶಂಕಿತರನ್ನು ಅಕ್ಟೋಬರ್ 4 ರವರೆಗೆ ಎನ್ಸಿಬಿ ಕಸ್ಟಡಿಗೆ ನೀಡಲಾಗಿದೆ ಎಂದು ವರದಿಗಳು ಹೇಳಿವೆ.
ಸಲ್ಮಾನ್ ಖಾನ್ ಶಾರುಖ್ ಖಾನ್ ಅವರ ಮನೆ ಮನ್ನತ್ ಗೆ ಬರುವಂತೆ ಛಾಯಾಚಿತ್ರ ತೆಗೆಯಲಾಗಿದೆ. ಸಲ್ಮಾನ್ ತಮ್ಮ ರೇಂಜ್ ರೋವರ್ ನ ಮುಂದಿನ ಸೀಟಿನಲ್ಲಿ ಕುಳಿತಿದ್ದುಮನ್ನತ್ ಹೊರಗೆ ಜಮಾಯಿಸಿದ ಮಾಧ್ಯಮ ಸಿಬ್ಬಂದಿಗೆ ಸಲ್ಮಾನ್ ಸನ್ನೆ ಮಾಡುತ್ತಾ ಸಾಗಿ ಸಲ್ಮಾನ್ ತನ್ನ ಕಾರನ್ನು ಚಲಾಯಿಸಲು ದಾರಿ ಮಾಡಿಕೊಡುವಂತೆ ಕೇಳಿಕೊಂಡಿದ್ದಾರೆ.
ಆರ್ಯನ್ ಖಾನ್ ಬಂಧನ ಬಾಲಿವುಡ್ನಲ್ಲಿ ಸಧ್ಯ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ.