ಕಲಬುರಗಿ, ಅ.04 (DaijiworldNews/HR): ಬಿಜೆಪಿಯ ಶಾಸಕರೆಲ್ಲರೂ ಸಿಂಹಗಳಿದ್ದಂತೆ, ಮಾರಾಟ ವಸ್ತುಗಳಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಯಾರೂ ಕೂಡ ಬಿಜೆಪಿ ಪಕ್ಷ ತೊರೆಯಲ್ಲ. ಮೊದಲು ಕಾಂಗ್ರೆಸಿಗರು ತಮ್ಮವರನ್ನು ಉಳಿಸಿಕೊಳ್ಳಲಿ" ಎಂದಿದ್ದಾರೆ.
ಇನ್ನು ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಮೋದಿ ವಿರುದ್ಧ ಲಘುವಾಗಿ ಮಾತನಾಡಿ ಅವರನ್ನು ಚಿಲ್ಲರೆ ಮನುಷ್ಯ ಎಂದು ಟೀಕಿಸಿದ್ದು, ಮೋದಿ ಅವರ ಕಾರ್ಯವನ್ನು ವಿಶ್ವವೇ ಮೆಚ್ಚಿಕೊಂಡಿದೆ. ಕೂಡಲೇ ಖರ್ಗೆ ಅವರು ಕ್ಷಮೆ ಯಾಚಿಸಬೇಕು" ಎಂದರು.
ಕಾಂಗ್ರೆಸ್ನ ಕೆಲವರು ಬಿಜೆಪಿಯ 44 ಶಾಸಕರು ಪಕ್ಷ ತೊರೆದು ನಮ್ಮ ಜತೆ ಬರುತ್ತಾರೆ ಎಂದು ಹೇಳುತ್ತಿದ್ದು, ಇದು ಅವರ ಕನಸಿನ ಮಾತು. ಯಾರೂ ಕೂಡ ಸಾಯುತ್ತಿರುವ ಪಕ್ಷಕ್ಕೆ ಹೋಗುವುದಿಲ್ಲ ಎಂದು ಹೇಳಿದ್ದಾರೆ.