ಸಿದ್ಧಾರ್ಥನಗರ, ಅ.04 (DaijiworldNews/PY): "ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ನಂತರ ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸುಧಾರಣೆಯಾಗಿದೆ" ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, "ಅನೈತಿಕ ರೀತಿಯಲ್ಲಿ ಬಡ ವ್ಯಕ್ತಿಯಿಂದ ಭೂಮಿಯನ್ನು ಕಸಿದುಕೊಂಡು ಭೂ ಮಾಫಿಯಾ ತಮ್ಮ ಕೋಟೆಯನ್ನು ನಿರ್ಮಾಣ ಮಾಡಿದರೆ, ಅದರ ಮೇಲೆ ಬುಲ್ಡೋಜರ್ಗಳನ್ನು ಚಲಾಯಿಸಲು ಸರ್ಕಾರ ಹಿಂಜರಿಯುವುದಿಲ್ಲ" ಎಂದಿದ್ದಾರೆ.
"ಹಿಂದೆ ಅಧಿಕಾರದಲ್ಲಿದ್ದ ಸರ್ಕಾರಗಳು ಭೂ ಮಾಫಿಯಾಕ್ಕೆ ಪ್ರೋತ್ಸಾಹಿಸುತ್ತಿದ್ದವು. ಆದರೆ, ಬಿಜೆಪಿ ಸರ್ಕಾರ ಭೂ ಮಾಫಿಯಾ ನಡೆಸುತ್ತಿದ್ದವರಿಂದ ಸುಮಾರು 64,000 ಹೆಕ್ಟೇರ್ ಭೂಮಿಯನ್ನು ಮುಕ್ತಗೊಳಿಸಿದೆ" ಎಂದು ತಿಳಿಸಿದ್ದಾರೆ.