ಲಕ್ನೋ, ಅ 04 (DaijiworldNews/MS): ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಸೀತಾಪುರ ಜಿಲ್ಲೆಯ ಹರಗಾಂವ್ ನಿಂದ ಬಂಧಿಸಲಾಗಿದೆ. ಅವರು ಭಾನುವಾರದಂದು ಎಂಟು ಜೀವಗಳನ್ನು ಬಲಿ ತೆಗೆದುಕೊಂಡ ಹಿಂಸಾಚಾರ ಪೀಡಿತ ಲಖಿಂಪುರ್ ಖೇರಿಗೆ ಹೋಗುತ್ತಿದ್ದಾಗ ಬಂಧಿಸಲಾಗಿದೆ.
ಪ್ರಿಯಾಂಕಾ ಗಾಂಧಿಯವರ ಬೆಂಗಾವಲನ್ನು ಲಕ್ನೋದಲ್ಲಿ ನಿಲ್ಲಿಸಲಾಗಿತ್ತು ಮತ್ತು ಪ್ರಿಯಾಂಕಾ ಲಕ್ನೋ ಭೇಟಿ ಸಮಯದಲ್ಲಿ ತಂಗಿದ್ದ ಕೌಲ್ ಮನೆಯನ್ನು ಪೊಲೀಸರು ಸುತ್ತುವರಿದಿದ್ದರೂ ಅದರೂ ಪಕ್ಕದ ಗೇಟ್ನಿಂದ ತಮ್ಮ ನಿವಾಸದಿಂದ ಹೊರನಡೆದ ಪ್ರಿಯಾಂಕಾ ಪೋಲಿಸ ಕಾವಲು ಭೇದಿಸಿ ಮುಂದೆ ಹೊಗಲು ಯಶಸ್ವಿಯಾದರು ಸ್ವಲ್ಪ ದೂರ ಹೋದ ನಂತರ, ಅವರಿಗಾಗಿ ಕಾಯುತ್ತಿದ್ದ ಕಾರಿನಲ್ಲಿ ಹತ್ತಿ ಕಾಂಗ್ರೆಸ್ ನಾಯಕ ದೀಪೇಂದ್ರ ಸಿಂಗ್ ಹೂಡಾದೊಂದಿಗೆ ಲಖಿಂಪುರ್ ಖೇರಿಗೆ ಹೊರಟರು.
ಹಿಂಸಾಚಾರಪೀಡಿತ ಪ್ರದೇಶವಾದ ಲಖಿಂಪುರದಲ್ಲಿ ಉದ್ವಿಗ್ನತೆಯ ನಡುವೆ ಮುಖ್ಯ ರಸ್ತೆಗಳಲ್ಲಿ ಭಾರಿ ಭದ್ರತೆಯನ್ನು ನಿಯೋಜಿಸಿದ್ದರಿಂದ, ಸೌತಾಪುರದ ಗಡಿಯಲ್ಲಿರುವ ಹರ್ಗಾಂವ್ ಪ್ರದೇಶವನ್ನು ತಲುಪಲು ಪರ್ಯಾಯ ಮಾರ್ಗಗಳನ್ನು ತೆಗೆದುಕೊಳ್ಳಬೇಕಾಯಿತು. ಪ್ರಿಯಾಂಕಾ ಸೋಮವಾರ ಬೆಳಿಗ್ಗೆ 6 ಗಂಟೆಗೆ ಸೀತಾಪುರ ಜಿಲ್ಲೆಯ ಹರಗಾಂವ್ ತಲುಪಿದ ತಕ್ಷಣ, ಅವರನ್ನು ತಡೆಯಲಾಯಿತು. ಮಹಿಳಾ ಕಾನ್ಸ್ಟೇಬಲ್ ಜೊತೆ ಸಣ್ಣ ಜಗಳದ ನಂತರ, ಪ್ರಿಯಾಂಕಾ ತನ್ನ ಬಂಧನ ವಾರಂಟ್ ಅನ್ನು ನೋಡಲು ಒತ್ತಾಯಿಸಿದರು. ಪೊಲೀಸ್ ಸಿಬ್ಬಂದಿ ಆಕೆಯನ್ನು ವಶಕ್ಕೆ ತೆಗೆದುಕೊಂಡರು ಮತ್ತು ಆಕೆಯನ್ನು ಜಿಲ್ಲೆಯ ಪಿಎಸಿ ಕಚೇರಿಗೆ ಕರೆದೊಯ್ಯಲಾಯಿತು.
"ನಾನು ಮನೆಯಿಂದ ಹೊರಗೆ ಕಾಲಿಟ್ಟು ಅಪರಾಧ ಮಾಡುತ್ತಿಲ್ಲ. ನಾನು ಕೇವಲ ಪೀಡಿತ ಕುಟುಂಬಗಳನ್ನು ಭೇಟಿ ಮಾಡಲು ಮತ್ತು ಅವರ ದುಃಖವನ್ನು ಹಂಚಿಕೊಳ್ಳಲು ಬಯಸುತ್ತೇನೆ. ನಾನು ಏನು ತಪ್ಪು ಮಾಡುತ್ತಿದ್ದೇನೆ? ಮತ್ತು ನಾನು ಏನಾದರೂ ತಪ್ಪು ಮಾಡಿದ್ದರೆ, ನೀವು (ಯುಪಿ ಪೋಲಿಸ್) ಆದೇಶ, ವಾರಂಟ್ ಹೊಂದಿರಬೇಕು. ನೀವು (ಯುಪಿ ಪೋಲಿಸ್) ನನ್ನನ್ನು, ನನ್ನ ಕಾರನ್ನು ನಿಲ್ಲಿಸುತ್ತಿದ್ದೀರಿ, ಆದರೆ ಯಾವ ಕಾರಣಕ್ಕಾಗಿ?" ಎಂದು ಪ್ರಿಯಾಂಕಾ ಪ್ರಶ್ನಿಸಿದ್ದರು
ನಾವು ಲಖಿಂಪುರ್ ಖೇರಿಹೊರಗೆ ಕಾಯುತ್ತಿದ್ದೇವೆ. ಪೊಲೀಸರು ನಮ್ಮನ್ನು ಪ್ರವೇಶಿಸದಂತೆ ತಡೆದಿದ್ದಾರೆ. ಹಿಂಸಾಚಾರದ ಸಂತ್ರಸ್ತರನ್ನು ಭೇಟಿ ಮಾಡಲು ನಾವು ಇಲ್ಲಿಗೆ ಬಂದಿದ್ದೇವೆ ಎಂದು ಕಾಂಗ್ರೆಸ್ ರಾಷ್ಟ್ರೀಯ ಕಾರ್ಯದರ್ಶಿ ಧೀರಜ್ ಗುರ್ಜಾರ್ ಅವರು ಬೆಳಿಗ್ಗೆ 4.30ಕ್ಕೆ ದೂರವಾಣಿ ಮೂಲಕ ತಿಳಿಸಿದ್ದಾರೆ.