ಮುಂಬೈ, ಅ.03 (DaijiworldNews/HR): ಡ್ರಗ್ಸ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಹಾಗೂ ಇತರ ಏಳು ಜನರನ್ನು ಎನ್ಸಿಬಿ ಅಧಿಕಾರಿಗಳು ಭಾನುವಾರ ವಶಕ್ಕೆ ತೆಗೆದುಕೊಂಡಿದ್ದು, ಆರ್ಯನ್ ಇನ್ನು ಮಗು. ಅವನಿಗೆ ಉಸಿರಾಡಿಸಲು ಬಿಡಿ' ಎಂದು ನಟ ಸುನೀಲ್ ಶೆಟ್ಟಿ ನೆಟ್ಟಿಗರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಆರ್ಯನ್ ಖಾನ್ ಅವರನ್ನು ವಶಕ್ಕೆ ತೆಗೆದುಕೊಂಡ ವಿಚಾರದ ಕುರಿತು ಮಾಧ್ಯಮಗಳು ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆ ಹುಟ್ಟಿಹಾಕಿದ್ದು, ಮಗನನ್ನು ಬೆಳೆಸಿರುವ ರೀತಿ ಇದೇನಾ? ಎಂದು ಶಾರುಖ್ ಖಾನ್ ಅವತಿಗೆ ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
ಈ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಬಾಲಿವುಡ್ ನಟ ಸುನೀಲ್ ಶೆಟ್ಟಿ, ಎನ್ಸಿಬಿ ಯಾವುದೇ ಸ್ಥಳದಲ್ಲಿ ದಾಳಿ ಮಾಡಿದಾಗ ಮೊದಲು ಕೂಲಂಕುಷ ವಿಚಾರಣೆ ಮಾಡುತ್ತದೆ. ಅದೇ ರೀತಿ ಆರ್ಯನ್ನ್ನು ವಿಚಾರಣೆ ಮಾಡುತ್ತಿದ್ದು, ಆರ್ಯನ್ ಇನ್ನು ಕೂಡ ಮಗು. ಅವನಿಗೆ ಉಸಿರಾಡಿಸಲು ಬಿಡಿ' ಎಂದು ನೆಟ್ಟಿಗರಲ್ಲಿ ಮನವಿ ಮಾಡಿಕೊಂಡಿದ್ದಾರೆ. ತನಿಖೆ ನಡೆದು ನಿಜವಾದ ವಿಚಾರ ಹೊರ ಬರಲಿ. ಅಲ್ಲಿವರೆಗೆ ಸಮಾಧಾನದಿಂದಿರಿ' ಎಂದು ಅವರು ಹೇಳಿದ್ದಾರೆ.