ಬೆಂಗಳೂರು, ಅ.03 (DaijiworldNews/PY): "ಬಿಜೆಪಿಯಲ್ಲಿ ಮೂಲೆಗುಂಪಾಗಿರುವ ತಾನು ಜೀವಮಾನದಲ್ಲಿ ಮುಖ್ಯಮಂತ್ರಿಯಾಗಲಾರೆ ಎಂಬ ಹತಾಶೆಯಲ್ಲಿ ಈಶ್ವರಪ್ಪನವರಿಗೆ ಹುಚ್ಚು ಹಿಡಿದಿದೆ" ಎಂದು ರಾಜ್ಯ ಕಾಂಗ್ರೆಸ್ ಹೇಳಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಬಿಜೆಪಿಯಲ್ಲಿ ಮೂಲೆಗುಂಪಾಗಿರುವ ತಾನು ಜೀವಮಾನದಲ್ಲಿ ಮುಖ್ಯಮಂತ್ರಿಯಾಗಲಾರೆ ಎಂಬ ಹತಾಶೆಯಲ್ಲಿ ಈಶ್ವರಪ್ಪನವರಿಗೆ ಹುಚ್ಚು ಹಿಡಿದಿದೆ, ನಾಲಿಗೆಗೂ ಮೆದುಳಿಗೂ ಸಂಪರ್ಕ ತಪ್ಪಿದೆ. ಕೆ ಎಸ್ ಈಶ್ವರಪ್ಪ ಅವರೇ, ನಿಮ್ಮ ಹುಚ್ಚಿನ ಚಿಕಿತ್ಸೆಯ ವೆಚ್ಚವನ್ನು ಕಾಂಗ್ರೆಸ್ ಭರಿಸುತ್ತದೆ. ಜನತೆ ಮುಖಕ್ಕೆ ಉಗಿಯುವ ಮೊದಲು ನಿಮ್ಹಾನ್ಸ್ಗೆ ದಾಖಲಾಗಿ" ಎಂದಿದೆ.
"ಕರೋನಾ ಬಿಕ್ಕಟ್ಟಿನಿಂದ ಮಕ್ಕಳು ಶಿಕ್ಷಣದಿಂದ ವಿಮುಖರಾಗಿ ಬಾಲ ಕಾರ್ಮಿಕರಾಗುತ್ತಿರುವುದು ಆತಂಕಕಾರಿ. ಲಾಕ್ಡೌನ್ ಅವಧಿಯಲ್ಲಿ ಮಕ್ಕಳಿಗೆ ವಿದ್ಯೆಯನ್ನು ತಲುಪಿಸಲು ವಿಫಲವಾಗಿರುವ ಸರ್ಕಾರ ಇದುವರೆಗೂ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಯಾವುದೇ ಯೋಜನೆ ರೂಪಿಸದಿರುವುದು ಮಕ್ಕಳ ಭವಿಷ್ಯದೆಡೆಗೆ ಬಿಜೆಪಿಗಿರುವ ನಿರ್ಲಕ್ಷ್ಯತನಕ್ಕೆ ಸಾಕ್ಷಿ" ಎಂದು ಹೇಳಿದೆ.
ಬಿಜೆಪಿ ರಾಜ್ಯವನ್ನು 'ಡ್ರಗ್ಸ್ ಹಬ್' ಮಾಡಲು ತಯಾರಿ ನಡೆಸಿದಂತಿದೆ. ಅದಾನಿ ಬಂದರಿನಲ್ಲಿ ಬೃಹತ್ ಪ್ರಮಾಣದ ಡ್ರಗ್ಸ್ ದೊರಕಿದ್ದರ ಬಗ್ಗೆ ಯಾವ ಬಿಜೆಪಿಗರೂ ತುಟಿ ಬಿಚ್ಚಲಿಲ್ಲ, ಉನ್ನತ ತನಿಖೆಗೂ ವಹಿಸಲಿಲ್ಲ, ಇತ್ತ ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿ ಡ್ರಗ್ಸ್ ಜಾಲ ವ್ಯಾಪಕವಾಗಿದೆ. ಡ್ರಗ್ಸ್ ಮಾಫಿಯಾದೊಂದಿಗೆ ಬಿಜೆಪಿ ಕೈಜೋಡಿಸಿದೆಯೇ? ಎಂದು ಪ್ರಶ್ನಿಸಿದೆ.