ಮುಜಾಫರ್ನಗರ, ಅ.03 (DaijiworldNews/HR): ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗುಜ್ಜಾರ್ ಸಮುದಾಯವು ಉತ್ತರ ಪ್ರದೇಶದ ಅಧಿಕಾರದಿಂದ ಹೊರಗುಳಿಸುವ ಮೂಲಕ ಆಡಳಿತ ಪಕ್ಷದ ವಿರುದ್ಧ ಸೇಡು ತೀರಿಸಿಕೊಳ್ಳಲಿದೆ ಎಂದು ಬಿಜೆಪಿಯ ಮಾಜಿ ಶಾಸಕ ಅವತಾರ್ ಸಿಂಗ್ ಭದಾನ ಹೇಳಿದ್ದಾರೆ.
ಈ ಕುರಿತು ಗುಜ್ಜಾರ್ ಸಮ್ಮೇಳನದಲ್ಲಿ ಮಾತನಾಡಿದ ಅವರು, "2022 ರ ಚುನಾವಣೆಯಲ್ಲಿ ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿನ ಬಿಜೆಪಿ ಸರ್ಕಾರವನ್ನು ಆಡಳಿತದಿಂದ ಹೊರಗುಳಿಸಲು ಸಮುದಾಯವು ಒಗ್ಗೂಡಬೇಕು" ಎಂದಿದ್ದಾರೆ.
ಇನ್ನು ಉತ್ತರ ಪ್ರದೇಶದ ಬಿಜೆಪಿ ಆಡಳಿತದಲ್ಲಿ ಗುಜ್ಜಾರ್ ಸಮುದಾಯವನ್ನು ಅವಮಾನಿಸಲಾಗಿದ್ದು, ದಾದ್ರಿಯಲ್ಲಿ ಪ್ರತಿಮೆ ಅನಾವರಣದ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕ್ಷಮೆಯಾಚಿಸಬೇಕು" ಎಂದು ಒತ್ತಾಯಿಸಿದ್ದಾರೆ.