ಚಮೋಲಿ, ಅ.03 (DaijiworldNews/HR): ಉತ್ತರಾಖಂಡದ ತ್ರಿಶೂಲ್ ಬೇಸ್ ಕ್ಯಾಂಪ್ ನಿಂದ ನಾಪತ್ತೆಯಾಗಿದ್ದ ಸೈನಿಕರ ತಂಡದ ನಾಲ್ವರು ಶವವಾಗಿ ಪತ್ತೆಯಾಗಿರುವ ಘಟನೆ ಭಾನುವಾರ ನಡೆದಿದೆ.
ಸಾಂದರ್ಭಿಕ ಚಿತ್ರ
ಸೇನಾ ಹೆಲಿಕ್ಯಾಪ್ಟರ್ ಮೂಲಕ ಕಾರ್ಯಾಚರಣೆ ನಡೆಸಿ ಸುಟೊಲ್ ಎಂಬ ಹಳ್ಳಿಯಲ್ಲಿ ಘರ್ವಾಲ್ ಸ್ಕೌಟ್ ಪಡೆಗೆ ಸೇರಿದ ನಾಲ್ವರು ಯೋಧರ ಮೃತ ದೇಹಗಳನ್ನು ಪತ್ತೆ ಹಚ್ಚಲಾಗಿದೆ.
ನೌಕಾ ಪಡೆಯ 20 ಯೋಧರು ಟ್ರೆಕ್ಕಿಂಗ್ ಗೆ ತೆರಳಿದ್ದು, ಅವರಲ್ಲಿ 10 ಮಂದಿ ಶುಕ್ರವಾರ ಹಿಮಪಾತಕ್ಕೆ ಸಿಲುಕಿಕೊಂಡು ನಾಪತ್ತೆಯಾಗಿದ್ದರು. ನಾಪತ್ತೆಯಾದ ವಿಚಾರ ತಿಳಿದ ತಕ್ಷಣ ರಕ್ಷಣಾ ಕಾರ್ಯ ಕೈಗೊಳ್ಳಲಾಗಿತ್ತು
ಇನ್ನು ಸೆಪ್ಟೆಂಬರ್ ತಿಂಗಳಿನಲ್ಲಿ ಇದೆ ಪ್ರದೇಶದಲ್ಲಿ ಟ್ರೆಕ್ಕಿಂಗ್ ಗೆ ತೆರಳಿದ್ದ ಜರ್ಮನ್ ಪ್ರವಾಸಿಗನೊಬ್ಬ ನಾಪತ್ತೆಯಾಗಿದ್ದ ಎನ್ನಲಾಗಿದೆ.