ಬೆಳಗಾವಿ, ಅ.02 (DaijiworldNews/PY): ಚಲಿಸುತ್ತಿದ್ದ ಬಸ್ ನಿಲ್ಲಿಸಿ ಮಹಿಳೆಯೋರ್ವರ ಮೇಲೆ ಹಲ್ಲೆ ನಡೆಸಿದ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಆಲೂರು ಕೆ ಎಂ ಗ್ರಾಮದಲ್ಲಿ ನಡೆದಿದೆ.
ಹಲ್ಲೆಗೊಳಗಾದ ಮಹಿಳೆಯನ್ನು ವಂದನಾ ಎಂದು ಗುರುತಿಸಲಾಗಿದೆದ್ದು, ಪ್ರವೀಣ್ ಕಾಂಬ್ಳೆ ಎಂಬಾತ ಹಲ್ಲೆ ನಡೆಸಿದ ವ್ಯಕ್ತಿ.
ಚಿಕ್ಕೋಡಿ ಉಪವಿಭಾಗದ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಿಂದ ಬಾಡ ಗ್ರಾಮಕ್ಕೆ ಬಸ್ ಹೋಗುತ್ತಿತ್ತು. ಈ ಸಂದರ್ಭ ಆಲೂರು ಕೆ ಎಂದ ಗ್ರಾಮದ ಸಮೀಪ ಬಸ್ಗೆ ನುಗ್ಗಿದ ಆರೋಪಿ ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಜಗಳ ಬಿಡಿಸಲು ಮುಂದಾದ ಪ್ರಯಾಣಿಕರಿಗೆ ಮಹಿಳೆಯ ಬಳಿ ಬಾರದಂಯೆ ಬೆದರಿಕೆ ಹಾಕಿದ್ದಾನೆ. ಕೂಡಲೇ ಸ್ಥಳೀಯರು ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಧಾವಿಸಿದ ಸಂಕೇಶ್ವರ್ ಪೊಲೀಸರು ಆರೋಪಿ ಪ್ರವೀಣ್ ಕಾಂಬ್ಳೆಯನ್ನು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ.