ನವದೆಹಲಿ, ಅ.02 (DaijiworldNews/HR): ಕೃಷಿ ತಿದ್ದುಪಡಿ ಮಸೂದೆ, ಕೃಷಿ ಕ್ಷೇತ್ರದ ಸುಧಾರಣೆ ಕ್ರಮಗಳ ವಿರುದ್ಧ ವಿರೋಧಪಕ್ಷಗಳ ಟೀಕೆಗಳನ್ನು 'ಬೌದ್ಧಿಕ ಅಪ್ರಾಮಾಣಿಕತೆ' ಮತ್ತು 'ರಾಜಕೀಯ ವಂಚನೆ' ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, 'ರಾಜಕೀಯ ಪಕ್ಷವು ತಾನು ನೀಡಿದ್ದ ಭರವಸೆಗಳನ್ನು ಈಡೇರಿಸದಿರುವುದು ವಂಚನೆಯಾಗಲಿದೆ. ಕೆಲ ಪಕ್ಷಗಳು ಸುಧಾರಣೆ ಕುರಿತು ಭರವಸೆ ನೀಡಿದ್ದವು. ಸರ್ಕಾರ ಅವುಗಳನ್ನೇ ಜಾರಿಗೊಳಿಸಿದರೆ ಈಗ ಮಾತು ತಪ್ಪುತ್ತಿವೆ. ತಪ್ಪು ತಿಳಿವಳಿಕೆ ಮೂಡಿಸುತ್ತಿವೆ" ಎಂದರು.
ಇನ್ನು "ಜನರು ಕೆಲ ಸೌಲಭ್ಯಗಳಿಗೆ ಅರ್ಹರಾಗಿದ್ದು,ಇವು ದಶಕಗಳ ಹಿಂದೆಯೇ ಅವರಿಗೆ ಸಿಗಬೇಕಿತ್ತು. ಆದರೆ ಇನ್ನೂ ತಲುಪಿಲ್ಲ. ಇನ್ನೂ ದೀರ್ಘ ಕಾಲ ಕಾಯುವಂತಯ ಪರಿಸ್ಥಿತಿ ಭಾರತದಲ್ಲಿ ಇರಬಾರದು. ಸೌಲಭ್ಯಗಳನ್ನು ತಲುಪಿಸಬೇಕು. ಇದಕ್ಕಾಗಿ ಕಠಿಣ ನಿರ್ಧಾರ ಅಗತ್ಯ" ಎಂದಿದ್ದಾರೆ.
ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಕೃಷಿ ಕಾಯ್ದೆ ಹಾಗೂ ಕೃಷಿ ಕ್ಷೇತ್ರದ ಸುಧಾರಣೆ ಕುರಿತು ಕಾಂಗ್ರೆಸ್ ಪಕ್ಷ ಸೇರಿದಂತೆ ವಿರೋಧಪಕ್ಷಗಳು ಮಾತನಾಡಿದ್ದು, ಈ ಕಾಯ್ದೆಗಳಿಗೆ ಕೃಷಿಕ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿದೆ.