ಚಿಕ್ಕಮಗಳೂರು, ಅ.02 (DaijiworldNews/PY): ಬಿಜೆಪಿ ಪಕ್ಷವನ್ನು ತುಕ್ಡೆ ತುಕ್ಡೆ ಮಾಡುತ್ತೇವೆ ಎಂದ ಕಾಂಗ್ರೆಸ್ ನಾಯಕ ಕನ್ಹಯ್ಯ ಕುಮಾರ್ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ, "ಕನ್ಹಯ್ಯ ಕುಮಾರ್ ತುಕ್ಡೆ ಗ್ಯಾಂಗ್ನ ನಾಯಕ" ಎಂದಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ತುಕ್ಡೆ ಗ್ಯಾಂಗ್ನ ನಾಯಕರಿಗೆ ಈ ಗತಿ ಇರಲಿಲ್ಲ. ಚುನಾವಣೆಯಲ್ಲಿ ಗೆಲುವು ಸಾಧಿಸಲಿಲ್ಲ. ಈ ರೀತಿಯ ಮಂದಿ ಮಾತನಾಡಿ ಮಾತನಾಡಿ ಮಣ್ಣಾಗಿದ್ದಾರೆ" ಎಂದು ಕಿಡಿಕಾರಿದ್ದಾರೆ.
"ಈ ರೀತಿಯಾಗಿ ಹೇಳಿ ಇವರ ತಾತಾ, ಮುತ್ತಾತರು ಕಳೆದು ಹೋಗಿದ್ದಾರೆ. ಅವರ ಸಮಾಧಿ ಮಣ್ಣಿನ ಮೇಲೆ ಸಂಘ, ಬಿಜೆಪಿ ಬಲವಾಗಿ ನಿಂತಿದೆ" ಎಂದಿದ್ದಾರೆ.
"ಆಂತರಿಕ ಪ್ರಜಾಫ್ರಭುತ್ವ ಇಲ್ಲದ ಪಕ್ಷ ದೇಶಕ್ಕೆ ಏನು ಪ್ರಜಾಪ್ರಭುತ್ವದ ಪಾಠ ಹೇಳುತ್ತದೆ?. ಕಾಂಗ್ರೆಸ್ನಲ್ಲಿ ಆಂತರಿಕ ಪ್ರಜಾಪ್ರಭುತ್ವದ ಎಲ್ಲಿದೆ?. ಇಲ್ಲಿ ಮಾಲೀಕರು- ನೌಕರರು, ಮಾಲೀಕರು-ಗುಲಾಮರು ಇರುತ್ತಾರೆ" ಎಂದು ಹೇಳಿದ್ದಾರೆ.