ಬೆಂಗಳೂರು, ಅ.02 (DaijiworldNews/HR): ಕರ್ನಾಟಕದಲ್ಲಿ 'ಜೇಮ್ಸ್ ಬಾಂಡ್' ಹಾಗೂ ರಾಜಸ್ಥಾನದಲ್ಲಿ ಬಿಚ್ಚು ಗ್ಯಾಂಗ್ ಎಂಬ ಹೆಸರಲ್ಲಿ ಕಳ್ಳತನ ಮಾಡುತ್ತಿದ್ದ ಬಿಚ್ಚು ಗ್ಯಾಂಗ್ನ ನಾಲ್ವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಬಂಧಿತರನ್ನು ಬಿಚ್ಚು ಗ್ಯಾಂಗ್ನ ಸುನೀಲ್, ಭವಾನಿ ಸಿಂಗ್, ಆಶುರಾಮ್ ಗುಜಾರ್ ಹಾಗೂ ಕಿಶೋರ್ ಸಿಂಗ್ ಎಂದು ಗುರುತಿಸಲಾಗಿದೆ.
ಬೆಂಗಳೂರಿನಲ್ಲಿರುವ ಉದ್ಯಮಿಗಳು, ವ್ಯಾಪಾರಿಗಳು ಹಾಗೂ ಶೋ ರೂಂ ಗಳನ್ನೇ ಟಾರ್ಗೆಟ್ ಮಾಡಿಕೊಂಡಿದ್ದ ಈ ಗ್ಯಾಂಗ್ ರಾತ್ರಿ ವೇಳೆ ಕಳ್ಳತನ ನಡೆಸುತ್ತಿದ್ದರು. ಅಲ್ಲದೇ ಮನೆಗಳಲ್ಲೂ ಕಳ್ಳತನ ಮಾಡಿ ಬಳಿಕ ಗೋಡೆಯ ಮೇಲೆ '007 ಫಿರ್ ಆಯೇಂಗೆ' ಎಂದು ಬರೆದು ಪರಾರಿಯಾಗುತ್ತಿದ್ದು, ಈ ಕಳ್ಳತನದ ದೃಶ್ಯ ಟಿವಿಯಲ್ಲಿ ಸೆರೆಯಾಗಿತ್ತು.
ಇನ್ನು ಪ್ರಕರಣದ ಬೆನ್ನುಹತ್ತಿದ್ದ ಬೆಂಗಳೂರು ಮಾರ್ಕೆಟ್ ಪೊಲೀಸರು 15 ದಿನಗಳ ಕಾಲ ರಾಜಸ್ಥಾನದಲ್ಲಿ ಬೀಡುಬಿಟ್ಟು ಇದೀಗ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.