ಅಯೋಧ್ಯೆ, ಅ 02 (DaijiworldNews/MS): ಅಕ್ಟೋಬರ್ 2 ರೊಳಗೆ ಭಾರತವನ್ನು 'ಹಿಂದೂ ರಾಷ್ಟ್ರ' ಎಂದು ಘೋಷಿಸುವಂತೆ ಕೇಂದ್ರವನ್ನು ಒತ್ತಾಯಿಸಿದ್ದ ಇಲ್ಲವಾದರೆ ಜಲ ಸಮಾಧಿಯಾಗುವುದಾಗಿ ಎಚ್ಚರಿಕೆ ನೀಡಿದ್ದ ಖ್ಯಾತ ಜಗದ್ಗುರು ಪರಮಹಂಸ ಆಚಾರ್ಯ ಮಹಾರಾಜ್ ಅವರನ್ನು ಗೃಹಬಂಧನದಲ್ಲಿರಿಸಲಾಗಿದೆ.
ಅಕ್ಟೋಬರ್ 2 ರೊಳಗೆ ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸದಿದ್ದರೆ, ಸರಯೂ ನದಿಯಲ್ಲಿ 'ಜಲ ಸಮಾಧಿ ಯಾಗುವ ಬಗ್ಗೆ ಸರ್ಕಾರಕ್ಕೆ ಅಂತಿಮ ಎಚ್ಚರಿಕೆ ನೀಡಿದ್ದರು. ಸರಯೂ ನದಿಯಲ್ಲು 'ಜಲ ಸಮಾಧಿ' ಯಾಗಲು ಅಯೋಧ್ಯೆಯಲ್ಲಿ ಸಿದ್ಧತೆಗಳು ನಡೆಯುತ್ತಿತ್ತು.
ಈ ಬಗ್ಗೆ ಹೇಳಿಕೆ ನೀಡಿದ್ದು, "ಒಮ್ಮೆ ನಾನು 'ಜಲ ಸಮಾಧಿ'ಯನ್ನು ತೆಗೆದುಕೊಂಡ ನಂತರ, ನನ್ನ ಅನುಯಾಯಿಗಳು ನನ್ನ ಧ್ವನಿಯಾಗುತ್ತಾರೆ, ಭಾರತವನ್ನು' ಹಿಂದೂ ರಾಷ್ಟ್ರ 'ಎಂದು ಘೋಷಿಸುವವರೆಗೂ ಅವರು ತಮ್ಮ ಬೇಡಿಕೆ ಮತ್ತು ಹೋರಾಟವನ್ನು ಮುಂದುವರಿಸುತ್ತಾರೆ. ಆರಂಭದಲ್ಲಿ ನಾನು ಒಬ್ಬಂಟಿಯಾಗಿದ್ದೆ, ಈಗ 50 ಕೋಟಿಗೂ ಹೆಚ್ಚು 'ರಾಷ್ಟ್ರ ಪ್ರೇಮಿ' ನಮ್ಮ ಬೆಂಬಲದಲ್ಲಿದೆ" ಎಂದು ಹೇಳಿದ್ದರು.
ಹಿಂದೂ ಸನಾತನ ಧರ್ಮ" ಸಭೆಯ ಬಳಿಕ ಅವರನ್ನು ಗೃಹಬಂಧನದಲ್ಲಿ ಇರಿಸಿಲಾಗಿದ್ದು, ಅವರ ಆಶ್ರಮದ ಸುತ್ತಲೂ ಪೊಲೀಸರನ್ನು ನಿಯೋಜಿಸಲಾಗಿದೆ.