ಮಂಡ್ಯ, ಅ.02 (DaijiworldNews/PY): ಮಾಜಿ ಸಚಿವ, ಬಿಜೆಪಿ ಪರಿಷತ್ ಸದಸ್ಯ ಸಿ ಪಿ ಯೋಗೇಶ್ವರ್ ಅವರ ಪುತ್ರಿ ನಿಶಾ ಯೋಗೇಶ್ವರ್ಗೆ ಕಾನೂನು ಸಂಕಷ್ಟ ಎದುರಾಗಿದೆ.
ನಿಶಾ ಯೋಗೇಶ್ವರ್ ಅವರು ಸರಿಯಾಗಿ ಬಾಡಿಗೆ, ಕಂದಾಯ ಪಾವತಿ ಮಾಡದಡ ಕಾರಣ ಅವರ ವಿರುದ್ದ ಟಿಎಪಿಸಿಎಂಎಸ್ ಆಡಳಿತ ಮಂಡಳಿ ಕಾನೂನೂ ಹೋರಾಟಕ್ಕೆ ತೀರ್ಮಾನಿಸಿದೆ. ನಿಶಾ ಯೋಗೇಶ್ವರ್ ಅವರು ಡೆಕ್ಕನ್ ಫೀಲ್ಡ್ ಆಗ್ರೋ ಇಂಡಸ್ಟ್ರೀಸ್ ಮಾಲೀಕರಾಗಿದ್ದಾರೆ. 2017ರಲ್ಲಿ ಈ ಕಂಪೆನಿ ಗೋದಾಮು ಬಾಡಿಗೆಗೆ ಪಡೆದುಕೊಂಡಿತ್ತು. ಗೋದಾಮು ಮಂಡ್ಯ ಜಿಲ್ಲೆಯ ಮದ್ದೂರಿನ ಟಿಎಪಿಸಿಎಂಎಸ್ಗೆ ಸೇರಿದೆ.
ಕಂಪೆನಿಯ ಒಪ್ಪಂದದ ಪ್ರಕಾರ ಬಾಡಿಗೆ, ಕಂದಾಯ ಪಾವತಿ ಮಾಡುತ್ತಿಲ್ಲ. ಎಪ್ರಿಲ್ 2018ರಿಂದಲೇ ಬಾಡಿಗೆ ಪಾವತಿ ಮಾಡುತ್ತಿಲ್ಲ. ಗೋದಾಮು ಬಾಡಿಗೆ 42.47 ಲಕ್ಷ ಬಾಕಿ ಇದೆ. ಖಾಲಿ ಜಾಗದ ನೆಲ ಬಾಡಿಗೆ 1.09 ಲಕ್ಷ ಹಾಗೂ ಪುರಸಭೆ ಕಂದಾಯ 4.78 ಲಕ್ಷ ಬಾಕಿ ಇದೆ. ಈ ಹಿನ್ನೆಲೆ ನಿಶಾ ಯೋಗೇಶ್ವರ್ ವಿರುದ್ಧ ಟಿಎಪಿಸಿಎಂಎಸ್ ಆಡಳಿತ ಮಂಡಳಿ ಕಾನೂನು ಕ್ರಮಕ್ಕೆ ತೀರ್ಮಾನಿಸಿದೆ.