ಪಾಟ್ನಾ, ಅ. 01 (DaijiworldNews/SM): ಕನ್ನಯ್ಯ ಕುಮಾರ್ ಕಾಂಗ್ರೆಸ್ ಪಕ್ಷ ಸೇರ್ಪಡೆ ಬಗ್ಗೆ ಆರ್ ಜೆ ಡಿ ಪಕ್ಷ ವ್ಯಂಗ್ಯವಾಡಿದೆ. ಕನ್ನಯ್ಯ ಕುಮಾರ್ ಕಾಂಗ್ರೆಸ್ ಪಕ್ಷವನ್ನು ನಾಶಪಡಿಸಲು ಮುಂದಾಗಿದ್ದು, ಮತ್ತೋರ್ವ ಸಿಧು ಎಂದು ಹೇಳಿದೆ.
ಪ್ರಸ್ತುತ ಕಾಂಗ್ರೆಸ್ ಪರಿಸ್ಥಿತಿ ಮುಳುಗುವ ಹಡಗಿನಂತಿದೆ. ಈ ಪಕ್ಷಕ್ಕೆ ಕನ್ನಯ್ಯ ಕುಮಾರ್ ಸೇರ್ಪಡೆಗೊಂಡಲ್ಲಿ ಯಾವುದೇ ಬದಲಾವಣೆಯಾಗದು ಎಂದು ಆರ್ ಜೆಡಿ ಹಿರಿಯ ಮುಖಂಡ ಶಿವಾನಂದ ತಿವಾರಿ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷ ದೊಡ್ಡ ಹಡಗು, ಅದನ್ನು ಉಳಿಸಬೇಕಾದ ಅಗತ್ಯವಿದೆ ಎಂಬ ಕನ್ಹಯ್ಯ ಕುಮಾರ್ ಹೇಳಿಕೆಯನ್ನೇ ಕೇಂದ್ರೀಕರಿಸಿ ಆರ್ ಜೆಡಿ ಮುಖಂಡ ತಿವಾರಿ ವಾಗ್ದಾಳಿ ನಡೆಸಿದ್ದಾರೆ. ಕನ್ನಯ್ಯ ಕುಮಾರ್ ಮತ್ತೋರ್ವ ನವಜೋತ್ ಸಿಂಗ್ ಸಿಧುವಾಗಿದ್ದು, ಪಕ್ಷವನ್ನು ನಾಶ ಮಾಡಲು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಸದ್ಯ ಕಾಂಗ್ರೆಸ್ ಅವನತಿಯಂಚಿನಲ್ಲಿದ್ದಾರೆ ಎಂದು ಟಾಂಗ್ ನೀಡಿದ್ದಾರೆ.