ಬೆಂಗಳೂರು, ಅ.01 (DaijiworldNews/HR): ರಾಜ್ಯದಲ್ಲಿ ಶುಕ್ರವಾರ 589 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 887 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಸಾಂದರ್ಭಿಕ ಚಿತ್ರ
ರಾಜ್ಯ ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ, ಇಂದು ರಾಜ್ಯದಲ್ಲಿ 589 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 13 ಸೋಂಕಿತರು ಸಾವನ್ನಪ್ಪಿದ್ದು, 12,469 ಸಕ್ರಿಯ ಪ್ರಕರಣಗಳು ಇದೆ.
ಶುಕ್ರವಾರ 1,26,932 ಮಂದಿಯ ಪರೀಕ್ಷೆ ನಡೆಸಲಾಗಿದ್ದು, ಪಾಸಿಟಿವಿಟಿ ದರ ಶೇಕಡ 0.46 ರಷ್ಟು ಇದೆ.
ಇನ್ನು ಬೆಂಗಳೂರಿನಲ್ಲಿ 221 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 5 ಜನ ಸಾವನ್ನಪ್ಪಿದ್ದಾರೆ.