ಹಾಸನ, ಅ.01 (DaijiworldNews/PY): "ದೇವರು ಕಣ್ಬಿಟ್ಟು ಈಗ ಕಾಂಗ್ರೆಸ್ ಪಕ್ಷವನ್ನು ಕ್ಲೋಸ್ ಮಾಡಿಸುತ್ತಿದ್ದಾನೆ" ಎಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ ಲೇವಡಿ ಮಾಡಿದ್ದಾರೆ.
ಹಾಸನದಲ್ಲಿ ಮಾತನಾಡಿದ ಅವರು, "ಸುಳ್ಳು ಜಾಸ್ತಿ ದಿನ ನಡೆಯುವುದಿಲ್ಲ. ಧರ್ಮಕ್ಕೆ ಗೆಲವು ಇದ್ದೇ ಇರುತ್ತದೆ" ಎಂದಿದ್ದಾರೆ.
"ಜೆಡಿಎಸ್ನ ಕೆಲವು ಶಾಸಕರು ಕಾಂಗ್ರೆಸ್ಗೆ ಸೇರ್ಪಡೆಯಾಗುತ್ತಿರುವ ಬಗ್ಗೆ ಮಾತನಾಡಿದ ಅವರು, ನಮ್ಮ ಮಿಷನ್ ಓಡುತ್ತಿದೆ. ಜೆಡಿಎಸ್ನ ಮಿಷನ್ಗೆ ಕಾಂಗ್ರೆಸ್ ಕೈ ಹಾಕಿ, ನಮ್ಮ ಮಿಷನ್ ಅನ್ನು ತೆಗೆದುಕೊಂಡು ಓರಲ್ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ನಮ್ಮ ಮಿಷನ್ ಎಷ್ಟು ಗಟ್ಟಿ ಇದೆ ಎಂದು ತಿಳಿದುಕೊಳ್ಳಲಿ" ಎಂದು ಹೇಳಿದ್ದಾರೆ.
"ಬಿಜೆಪಿ ಲೀಡರ್ವೋರ್ವರು ನಮ್ಮ ಮಿಷನ್ ಮುಳುಗುತ್ತಿದೆ ಎಂದಿದ್ದಾರೆ. ಈಗಾಗಲೇ ಕಾಂಗ್ರೆಸ್ ಪಂಜಾಬ್ನಲ್ಲಿ ಕ್ಲೋಸ್ ಆಗುತ್ತಿದೆ. ನಮ್ಮ ಫ್ಯಾಕ್ಟರಿಯನ್ನು 1983ರಿಂದ ಹುಟ್ಟು ಹಾಕಿದ್ದೀವಿ. ನಮ್ಮ ಬಳಿ ತರಬೇತಿ ತೆಗೆದುಕೊಂಡು ಜಾಸ್ತಿ ಸಂಬಳ ಕೊಡುವ ಕಡೆ ಹೋಗುತ್ತಾರೆ" ಎಂದು ವ್ಯಂಗ್ಯವಾಡಿದ್ದಾರೆ.