ಕೊಚ್ಚಿ, ಅ.01 (DaijiworldNews/PY): ತನ್ನ ಪ್ರೀತಿಯನ್ನು ಒಪ್ಪಿಕೊಳ್ಳಲಿಲ್ಲ ಎನ್ನುವ ಕೋಪದಲ್ಲಿ ಯುವಕ ಪೇಪರ್ ಕಟರ್ನಿಂದ ಯುವತಿಯ ಕತ್ತು ಸೀಳಿ ಹತ್ಯೆ ಮಾಡಿದ ಘಟನೆ ಕೇರಳದ ಕೊಟ್ಟಾಯಂನಲ್ಲಿ ನಡೆದಿದೆ.
ಆರೋಪಿಯನ್ನು ಕೂತಟ್ಟುಕುಲಂ ನಿವಾಸಿ ಅಭಿಷೇಕ್ ಬೈಜು ಎಂದು ಗುರುತಿಸಲಾಗಿದೆ.
ಶುಕ್ರವಾರ ಬೆಳಗ್ಗೆ ಅಭಿಷೇಕ್ ನಿತಿನಾ ಮೋಲ್ (24) ತಮ್ಮ ಆಹಾರ ಸಂಸ್ಕರಣಾ ತಂತ್ರಜ್ಞಾನದಲ್ಲಿ ತಮ್ಮ ಪದವಿ ಕೋರ್ಸ್ನ ಅಂತಿಮ ಸೆಮಿಸ್ಟರ್ ಪರೀಕ್ಷೆಗೆ ಹಾಜರಾಗಲು ಕಾಲೇಜಿಗೆ ಬಂದಿದ್ದರು. ನಿತಿನಾ ಪರೀಕ್ಷೆ ಮುಗಿಸಿ ಪರೀಕ್ಷಾ ಹಾಲ್ನಿಂದ ಹೊರಬರುತ್ತಿದ್ದಂತೆ, ಬೈಜು ಆಕೆಯ ಕುತ್ತಿಗೆಯನ್ನು ಪೇಪರ್ ಕಟ್ಟರ್ನಿಂದ ಸೀಳಿ ಹತ್ಯೆ ಮಾಡಿದ್ದಾನೆ. ಈ ವೇಳೆ ನಿತಿನಾ ಕೆಳಗೆ ಬಿದ್ದಿದ್ದು, ಅಭಿಷೇಕ್ ಆಕೆಯನ್ನು ನಿಟ್ಟು ಅಲ್ಲಿಂದ ಪರಾರಿಯಾಗಿದ್ದಾನೆ.
ಅಭಿಷೇಕ್ ಹಾಗೂ ನಿತಿನಾ ಮೋಲ್ ಸಹಪಾಠಿಗಳಾಗಿದ್ದು, ಆಕೆಯನ್ನು ಅಭಿಷೇಕ್ ಪ್ರೀತಿಸುತ್ತಿದ್ದ. ಆದರೆ, ನಿತಿನಾ ಅಭಿಷೇಕ್ನನ್ನು ಪ್ರೀತಿಸಲು ಸಾಧ್ಯವಿಲ್ಲ ಎಂದಿದ್ದಳು. ಇದರಿಂದ ಕೋಪಗೊಂಡ ಅಭಿಷೇಕ್ ಪರೀಕ್ಷೆ ಮುಗಿಸಿ ಬಂದ ನಿತಿನಾಳ ಕುತ್ತಿಗೆ ಸೀಳಿ ಹತ್ಯೆ ಮಾಡಿದ್ದಾನೆ.
ಕೆಳಗೆ ಬಿದ್ದಿದ್ದ ನಿತಿನಾ ಮೋಲ್ಳನ್ನು ಸೆಕ್ಯುರಿಟಿ ಸಿಬ್ಬಂದಿ ನೋಡಿದ್ದು, ಜೋರಾಗಿ ಕೂಗಾಡಿದ್ದಾರೆ. ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿತ್ತಾದರೂ ಅಷ್ಟರಲ್ಲಿ ಆಕೆ ಮೃತಪಟ್ಟಿದ್ದಳು.
ಪೊಲೀಸರು ಅಭಿಷೇಕ್ನನ್ನು ಹಿಡಿದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.